Bengaluru 23°C
Ad

ಹಾಡಹಗಲೇ ತಲೆ ಮೇಲೆ‌ ಕಲ್ಲು ಎತ್ತಿ ಹಾಕಿ ಕೊಲೆ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹಾಡಹಗಲೇ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭಯಾನಕವಾಗಿ ಕೊಲೆ ಮಾಡಿರುವ ಘಟನೆ ಅಬ್ಬೆ ತುಮಕೂರಿನ ಹೊರವಲಯದಲ್ಲಿ ನಡೆದಿದೆ.

ಯಾದಗಿರಿ: ಹಾಡಹಗಲೇ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭಯಾನಕವಾಗಿ ಕೊಲೆ ಮಾಡಿರುವ ಘಟನೆ ಅಬ್ಬೆ ತುಮಕೂರಿನ ಹೊರವಲಯದಲ್ಲಿ ನಡೆದಿದೆ.

ಸಿದ್ದಪ್ಪ ಜಿಂಗೇನಾರು (40) ಕೊಲೆಯಾದ ವ್ಯಕ್ತಿ. ಸಿದ್ದಲಿಂಗಪ್ಪ. ಎಂಬಾತ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಆರೋಪಿಯೂ ಯಾದಗಿರಿಯ ಕನಕ‌ ನಗರದ ನಿವಾಸಿಯಾಗಿದ್ದು ಈ ಕೊಲೆ ಹಿಂದಿನ ಉದ್ದೇಶ ತಿಳಿದು ಬಂದಿಲ್ಲ.

ಆದರೆ ಈ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಪ್ರಾಣ ಬಿಟ್ಟಿದ್ದಾನೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೊಲೆ ಮಾಡಿದ ಆರೋಪಿಯನ್ನು ಯಾದಗಿರಿ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಈ ಘಟನೆ ಸಂಬಂಧ ಕೇಸ್​ ದಾಖಲಿಸಿಕೊಂಡ ಪೊಲೀಸ್ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Ad
Ad
Nk Channel Final 21 09 2023
Ad