Bengaluru 23°C
Ad

ಶಿರಾಡಿಯ ಉದನೆಯಲ್ಲಿ ಪಂಚದೈವಗಳಿಗೆ ಕೋಲ; ದೈವಗಳಿಂದ ಸಿರಿಮುಡಿ ಗಂಧ ಪ್ರಸಾದ

Kola

ಮಂಗಳೂರು: ಧ್ವಜವೇರಿ ಆಗುವ ಉತ್ಸವ, ನೇಮದೊಂದಿಗೆ ಜಾತ್ರೆ, ಅಂಕ, ಆಯನ, ಯಕ್ಷಗಾನಗಳಿಗೆ ಪತ್ತನಾಜೆಯಂದೇ ತೆರೆ ಬಿದ್ದಿದೆ. ಆದರೂ ಅಲ್ಲೊಂದು ಇಲ್ಲೊಂದು ಎಂಬಂತೆ ಕೋಲಗಳು ನಡೆಯುತ್ತಿರುತ್ತದೆ. ಅದೇ ರೀತಿ ಶಿರಾಡಿಯ ಉದನೆಯಲ್ಲಿ ಅಪರೂಪವೆಂಬಂತೆ ಪಂಚದೈವಗಳಿಗೆ ನಡೆದ ಕೋಲ ಎಲ್ಲರ ಗಮನ ಸೆಳೆಯಿತು.

ಹೌದು… ದಕ್ಷಿಣ ಕನ್ನಡಕ ಜಿಲ್ಲೆಯ ಶಿರಾಡಿ ಗ್ರಾಮದ ಉದನೆ ಪೊಟ್ಯಾಳ್ ನಲ್ಲಿ ಪತ್ತನಾಜೆಯ ಬಳಿಕ ಪಂಚ ದೈವಗಳಿಗೆ ಕೋಲ ಜರುಗಿದೆ. ತುಳವರ ಮನೆಮನೆಗಳಲ್ಲೂ ಆರಾಧನೆಗೊಳ್ಳುವ ಕಲ್ಲುರ್ಟಿ, ಮಂತ್ರದೇವತೆಯೊಂದಿಗೆ ಕೊರಗಜ್ಜ, ಗುಳಿಗ ಹಾಗೂ ಮಯ್ಯಲ್ತಿ ದೈವಗಳಿಗೆ ಕೋಲ ಜರುಗಿತು.

ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರ ಬರ್ಕಜೆಯ ಧರ್ಮದರ್ಶಿಗಳ‌ ನೇತೃತ್ವದಲ್ಲಿ ಪಂಚದೈವಗಳಿಗೆ ವಿಜೃಂಭಣೆಯಿಂದ ಕೋಲ ನಡೆದಿದೆ. ಅಧಿಕ ಸಂಖ್ಯೆಯಲ್ಲಿ ಭಕ್ತರು ದೈವಗಳ ಕೋಲದಲ್ಲಿ ಭಾಗಿಯಾಗಿ ದೈವಗಳಿಂದ ಸಿರಿಮುಡಿ ಗಂಧಪ್ರಸಾದ ಪಡೆದು ಕೊಂಡರು.

Ad
Ad
Nk Channel Final 21 09 2023
Ad