Bengaluru 22°C
Ad

ಪೇಟಿಎಂನ ಸಿನಿಮಾ ಮತ್ತು ಈವೆಂಟ್​​ಗಳ ಟಿಕೆಟ್ ಖರೀದಿಗೆ ಜೊಮಾಟೊ ಸಜ್ಜು

ನಷ್ಟದ ಹೊರೆಯಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿರುವ ಪೇಟಿಎಂ ಸಂಸ್ಥೆ ಇದೀಗ ಸಿನಿಮಾ ಮತ್ತು ಈವೆಂಟ್​​ಗಳ ಟಿಕೆಟ್ಗಳನ್ನು ಜೊಮಾಟೊಗೆ ಮಾರಲು ಸಜ್ಜಾಗಿದೆ.

ನವದೆಹಲಿ : ನಷ್ಟದ ಹೊರೆಯಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿರುವ ಪೇಟಿಎಂ ಸಂಸ್ಥೆ ಇದೀಗ ಸಿನಿಮಾ ಮತ್ತು ಈವೆಂಟ್​​ಗಳ ಟಿಕೆಟ್ಗಳನ್ನು ಜೊಮಾಟೊಗೆ ಮಾರಲು ಸಜ್ಜಾಗಿದೆ.ಇದರ ಭಾಗವಾಗಿ ಸಿನಿಮಾ ಮತ್ತು ಈವೆಂಟ್​​ಗಳ ಟಿಕೆಟ್ ಮಾರಾಟದ ಬಿಸಿನೆಸ್ ಅನ್ನು ಮಾರಾಟ ಮಾಡುತ್ತಿದೆ. ಈ ಸಂಬಂಧ ಜೊಮಾಟೋದೊಂದಿಗೆ ಪೇಟಿಎಂ ಮಾತುಕತೆ ನಡೆಸುತ್ತಿದೆ ಎಂದು ಬ್ಲೂಮ್​ಬರ್ಗ್ ನ್ಯೂಸ್ ಏಜೆನ್ಸಿಯ ವರದಿಯೊಂದರಲ್ಲಿ ತಿಳಿಸಲಾಗಿದೆ.

ಮೂಲಗಳಿಂದ ಮಾಹಿತಿ ಉಲ್ಲೇಖಿಸಿರುವ ಈ ವರದಿ ಪ್ರಕಾರ ಒನ್97 ಕಮ್ಯೂನಿಕೇಶನ್ಸ್ ಹಾಗೂ ಜೊಮಾಟೋ ನಡುವಿನ ಮಾತುಕತೆ ಬಹುತೇಕ ಅಂತಿಮ ಹಂತದಲ್ಲಿದೆ ಎನ್ನಲಾಗುತ್ತಿದೆ. ಪೇಟಿಎಂನ ಈ ಟಿಕೆಟ್ ಡಿವಿಶನ್ ಅನ್ನು ಖರೀದಿಸಲು ಜೊಮಾಟೋ ಮಾತ್ರವಲ್ಲ, ಬೇರೆ ಹಲವು ಸಂಸ್ಥೆಗಳೂ ಆಸಕ್ತಿ ತೋರಿವೆಯಂತೆ. ಜೊಮಾಟೊದೊಂದಿಗಿನ ಮಾತುಕತೆ ಫಲಪ್ರದವಾಗದೇ ಇದ್ದಲ್ಲಿ ಬೇರೆ ಆಸಕ್ತಿ ಕಂಪನಿಗಳ ಜೊತೆ ಪೇಟಿಎಂ ಮಾತುಕತೆ ನಡೆಸಬಹುದು.

Ad
Ad
Nk Channel Final 21 09 2023
Ad