Bengaluru 24°C
Ad

ದಾಖಲೆ ಬರೆದ ರಿಲಾಯನ್ಸ್ ಇಂಡಸ್ಟ್ರೀಸ್ : 21 ಲಕ್ಷ ಕೋಟಿ ಗಡಿ ದಾಟಿದ ಮಾರುಕಟ್ಟೆ ಬಂಡವಾಳ

ರಿಲಾಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳದಲ್ಲಿ ಹೊಸ ದಾಖಲೆ ಬರೆದಿದೆ. ಬೆಳಗಿನ ಒಂದು ಅವಧಿಯಲ್ಲಿ ಆರ್​ಐಎಲ್ ಷೇರುಬೆಲೆ 3,129 ರೂ ಮಟ್ಟಕ್ಕೆ ಹೋಗಿತ್ತು. ಮಧ್ಯಾಹ್ನ 12:30ರ ವೇಳೆಗೆ 3,112 ರೂಗೆ ಏರಿತ್ತು.

ಬೆಂಗಳೂರು : ರಿಲಾಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳದಲ್ಲಿ ಹೊಸ ದಾಖಲೆ ಬರೆದಿದೆ. ಬೆಳಗಿನ ಒಂದು ಅವಧಿಯಲ್ಲಿ ಆರ್​ಐಎಲ್ ಷೇರುಬೆಲೆ 3,129 ರೂ ಮಟ್ಟಕ್ಕೆ ಹೋಗಿತ್ತು. ಮಧ್ಯಾಹ್ನ 12:30ರ ವೇಳೆಗೆ 3,112 ರೂಗೆ ಏರಿತ್ತು. ಇದರೊಂದಿಗೆ ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಇಂಡಸ್ಟ್ರೀಸ್​ನ ಒಟ್ಟು ಮಾರುಕಟ್ಟೆ ಬಂಡವಾಳ ಅಥವಾ ಷೇರುಸಂಪತ್ತು 21 ಲಕ್ಷ ಕೋಟಿ ರೂ ಗಡಿ ದಾಟಿದೆ. ಈ ಮಟ್ಟದ ಮಾರ್ಕೆಟ್ ಕ್ಯಾಪ್ ಹೊಂದಿರುವ ಏಕೈಕ ಕಂಪನಿ ಆರ್​ಐಎಲ್.

ರಿಲಾಯನ್ಸ್ ಜಿಯೋ ಇನ್ಫೋಕಾಮ್ ಸಂಸ್ಥೆ ನಿನ್ನೆ ಗುರುವಾರ ಸಂಜೆ ಮೊಬೈಲ್ ದರಗಳನ್ನು ಹೆಚ್ಚಿಸಿದೆ. ಶೇ. 27ರವರೆಗೂ ಬೆಲೆ ಹೆಚ್ಚಳ ಮಾಡಿದೆ. ಜುಲೈ 3ಕ್ಕೆ ಹೊಸ ದರಗಳು ಅನ್ವಯ ಆಗುತ್ತವೆ. ಜಿಯೋ ನಿರ್ಧಾರದ ಬೆನ್ನಲ್ಲೇ ಏರ್ಟೆಲ್ ಕೂಡ ದರ ಪರಿಷ್ಕರಣೆ ಮಾಡಿದೆ. ಟೆಲಿಕಾಂ ಕಂಪನಿಗಳು ಹಲವಾರು ತಿಂಗಳುಗಳಿಂದಲೂ ಡಾಟಾ ದರ ಏರಿಕೆಗೆ ಅಣಿಯಾಗಿದ್ದವು

 

Ad
Ad
Nk Channel Final 21 09 2023
Ad