Bengaluru 23°C
Ad

ಕೆಲಸ ಕಳೆದುಕೊಂಡ 3,500 ಪೇಟಿಎಂ ಉದ್ಯೋಗಿಗಳು! ಕಾರಣ ಇಲ್ಲಿದೆ

ಸಂಕಷ್ಟಗಳ ಸರಮಾಲೆಗಳ ಮಧ್ಯೆ ಲಾಭದ ಹಳಿಗೆ ಬರಲು ಹತಾಶೆಯ ಪ್ರಯತ್ನದಲ್ಲಿರುವ ಪೇಟಿಎಂ ಸಂಸ್ಥೆ (Paytm) ಈಗ ಆ ನಿಟ್ಟಿನಲ್ಲಿ ಮತ್ತೊಂದು ಸುತ್ತಿನ ಲೇ ಆಫ್ ಕ್ರಮ ಜರುಗಿಸಿದೆ. ಲೇ ಆಫ್ ಮಾಡಲಾಗಿರುವುದನ್ನು ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆ ಖಚಿತಪಡಿಸಿದೆ. ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ಬೇರೆಡೆ ಕೆಲಸ ಸಿಗಲು ನೆರವನ್ನೂ ಕೂಡ ಸಂಸ್ಥೆ ಒದಗಿಸುತ್ತಿದೆ.

ನವದೆಹಲಿ: ಸಂಕಷ್ಟಗಳ ಸರಮಾಲೆಗಳ ಮಧ್ಯೆ ಲಾಭದ ಹಳಿಗೆ ಬರಲು ಹತಾಶೆಯ ಪ್ರಯತ್ನದಲ್ಲಿರುವ ಪೇಟಿಎಂ ಸಂಸ್ಥೆ (Paytm) ಈಗ ಆ ನಿಟ್ಟಿನಲ್ಲಿ ಮತ್ತೊಂದು ಸುತ್ತಿನ ಲೇ ಆಫ್ ಕ್ರಮ ಜರುಗಿಸಿದೆ. ಲೇ ಆಫ್ ಮಾಡಲಾಗಿರುವುದನ್ನು ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆ ಖಚಿತಪಡಿಸಿದೆ. ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ಬೇರೆಡೆ ಕೆಲಸ ಸಿಗಲು ನೆರವನ್ನೂ ಕೂಡ ಸಂಸ್ಥೆ ಒದಗಿಸುತ್ತಿದೆ. ಆದರೆ, ಎಷ್ಟು ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ನಿರ್ದಿಷ್ಟವಾಗಿ ಸಂಸ್ಥೆ ಹೇಳಿಲ್ಲ. ವರದಿಗಳ ಪ್ರಕಾರ 3,500ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕೆಲಸ ಹೋಗಿದೆ ಎಂದು ಹೇಳಲಾಗುತ್ತಿದೆ.

ಪೇಟಿಎಂನಲ್ಲಿ 40,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದು, ಈಗ 3,500 ಮಂದಿಯ ಲೇ ಆಫ್ ಆದರೆ ಅದರ ಸಿಬ್ಬಂದಿ ವರ್ಗದ ಸಂಖ್ಯೆ 36,521ಕ್ಕೆ ಇಳಿಯಬಹುದು. ಲೇ ಆಫ್ ಆದವರಲ್ಲಿ ಸೇಲ್ಸ್ ವಿಭಾಗದವರು ಹೆಚ್ಚು ಎನ್ನಲಾಗಿದೆ.

ಲೇ ಆಫ್​ಗೆ ಏನು ಕಾರಣ?
ಆರ್​ಬಿಐನಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ನಿರ್ಬಂಧ ಬಿದ್ದದ್ದು ಒನ್97 ಕಮ್ಯೂನಿಕೇಶನ್ಸ್​ನ ವಿವಿಧ ಬಿಸಿನೆಸ್​ಗಳಿಗೆ ಹೊಡೆತ ಬಿದ್ದಂತಾಗಿದೆ. ನಷ್ಟದ ಪ್ರಮಾಣವೂ ಹೆಚ್ಚುತ್ತಿದೆ. ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಪೇಟಿಎಂಗೆ ಆದ ನಷ್ಟ 550 ಕೋಟಿ ರೂ. ಈ ನಷ್ಟವನ್ನು ಕಡಿಮೆ ಮಾಡಬೇಕೆಂದರೆ ಸಂಸ್ಥೆಯ ಸಿಬ್ಬಂದಿ ವರ್ಗದ ಮರುರಚನೆ ಮಾಡಬೇಕಾಗುತ್ತದೆ. ಉದ್ಯೋಗಿಗಳ ಸಂಖ್ಯೆ ಮೊಟಕುಗೊಳಿಸುವುದು ಅನಿವಾರ್ಯವಾಗಿದೆ.

Ad
Ad
Nk Channel Final 21 09 2023
Ad