Showing 20 of 21651 articles • Page 225 of 1083
“ಮಾ. 10ರೊಳಗೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ಕಠಿಣ ಹೋರಾಟ ಫಿಕ್ಸ್” ಎಂದು ಸರಕಾರಿ ವೈದ್ಯಾಧಿಕಾರಿಗಳ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಎಚ್ಚರಿಕೆ ನೀಡಿದೆ.
ವೈಚಾರಿಕ ಮತ್ತು ವೈಜ್ಞಾನಿಕತೆಯ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದೇ ಅದರ ಮೂಲ ಉದ್ದೇಶವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಉಡುಪಿಯ ಆರ್ಟಿಸ್ಟ್ಸ್ ಫೋರಂ ಸದಸ್ಯರ ಚಿತ್ರಕಲೆ ಮತ್ತು ಛಾಯಾಚಿತ್ರ ಕೃತಿಗಳ ಸಂಯುಕ್ತ ಪ್ರದರ್ಶನ ‘ಪಯಣ’ ಫೆ.28ರಿಂದ ಮಾ.2ರವರೆಗೆ ಉಡುಪಿಯ ಅಲಂಕಾರ್ ಥಿಯೇಟರ್ ಹಿಂಭಾಗದಲ್ಲಿರುವ ಗ್ಯಾಲರಿ ದೃಷ್ಠಿಯಲ್ಲಿ ನಡೆಯಲಿದೆ ಎಂದು ಫೋರಂ ಅಧ್ಯಕ್ಷ ರಮೇಶ್ ರಾವ್ ತಿಳಿಸಿದರು.
ಫೇಸ್ ಬುಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸುವ ಫೋಸ್ಟ್ ನ್ನು ಹಾಕಿದ ಬಿಂದು ಸಿರ ಎಂಬ ಮಹಿಳೆ ವಿರುದ್ಧ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಯುವವಾಹಿನಿ ಉಡುಪಿ ಘಟಕದ ರಜತ ಸಂಭ್ರಮದ ಸಮಾರೋಪ ಸಮಾರಂಭವು ಇದೇ ಫೆ. 28 ಮತ್ತು ಮಾರ್ಚ್ 1ರಂದು ಬನ್ನಂಜೆ ನಾರಾಯಣ ಗುರು ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಯುವವಾಹಿನಿ ಉಡುಪಿ ಘಟಕದ ದಯಾನಂದ ಕರ್ಕೇರ ತಿಳಿಸಿದರು.
ಕಾಂತಾರದ ವರಾಹರೂಪಂ ಖ್ಯಾತಿಯ ಸಾಯಿ ವಿಘ್ನೇಶ್ ಹಾಗೂ ಪತ್ನಿ ಖ್ಯಾತ ಭರತನಾಟ್ಯ ಕಲಾವಿದೆ ಕಾವ್ಯ ಮುರಳೀಧರನ್ ಅವರು ವಿವಾಹದ ಬಳಿಕ ಪ್ರಥಮ ಬಾರಿಗೆ ಕೃಷ್ಣಮಠಕ್ಕೆ ಆಗಮಿಸಿ ಕೃಷ್ಣನ ದರ್ಶನ ಪಡೆದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮಳೆಮಾಪನ ಕೇಂದ್ರಗಳ ದುರವಸ್ಥೆಯಿಂದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ಪರಿಹಾರ ವಿತರಣೆಯಲ್ಲಿ ಗಂಭೀರ ಗೊಂದಲ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಗ್ರಾ.ಪಂ.ಗಳ ಮಳೆಮಾಪನ ಕೇಂದ್ರಗಳನ್ನು ಸುಸ್ಥಿತಿಯಲ್ಲಿಡಲು ಸರ್ಕಾರ ಗಮನ ಹರಿಸಬೇಕು ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ತೋಟಗಾರಿಕಾ ಸಚಿವರಿಗೆ ಪತ್ರಬರೆದಿದ್ದಾರೆ.
ಶ್ರೀ ಕೃಷ್ಣ ಮಠಕ್ಕೆ ಉಪ ಲೋಕಾಯುಕ್ತ ನ್ಯಾ.ಬಿ. ವೀರಪ್ಪ ಭೇಟಿ ನೀಡಿ ದೇವರ ದರ್ಶನ ಪಡೆದರು.
ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ನ ಹೆಚ್ಚಿನ ಹೊರೆಯನ್ನು ಕಡಿಮೆ ಮಾಡಲು 14 ವರ್ಷ ವಯಸ್ಸಿನ ಬಾಲಕಿಯರಿಗೆ ದೇಶಾದ್ಯಂತ ಏಕ-ಡೋಸ್ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಲಸಿಕೆ ಅಭಿಯಾನವನ್ನು ಕೇಂದ್ರ ಸರ್ಕಾರ ಜಾರಿಗೆ ತರಲು ಸಜ್ಜಾಗಿದೆ.
ಮಂಗಳೂರು: ಕೆಎಂಎಫ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದ ಡಾ|| ಶರಣ್ಯ ಅವರನ್ನು ಮಣಿಪಾಲ್ ಆಸ್ಪತ್ರೆ ಕೆಲಸದಿಂದ ಕಿತ್ತು ಹಾಕಿದೆ. ಈ ನಡುವೆ ಶರಣ್ಯ ಮೇಲೆ ಎಫ್ಐಆರ್ ದಾಖಲಾಗಿದ್ದು 25 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಕೂಡ ಹಾಕಲಾಗಿದೆ. ಕೆಎಂಎಫ್ ಉತ್ಪನ್ನಗಳ ಬಗ್ಗೆ ಶರಣ್ಯ ವ್ಯಾಪಕ ಅಪಪ್ರಚಾರ ಮಾಡುತ್ತಿದ್ದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಉದ್ಯಮಶೀಲತೆಯತ್ತ ಸೆಳೆಯುವ ಹಾಗೂ ಅವರಿಗೆ ಭವಿಷ್ಯದಲ್ಲಿ ಸ್ವಂತ ಉದ್ಯಮ ಸ್ಥಾಪಿಸಲು ಬೇಕಾಗುವ ಅಗತ್ಯ ಮಾರ್ಗದರ್ಶನ ನೀಡುವ ದೃಷ್ಟಿಯಿಂದ ಮಂಗಳೂರಿನಲ್ಲಿ ಫೆ.28ರಂದು ‘ಪ್ರೇರಣಾ-2026’ ಉದ್ಯಮಶೀಲತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ರೋಗಿಗಳು ವಾರಾಂತ್ಯಗಳಲ್ಲಿಯೂ ಸಹ ಗುಣಮಟ್ಟದ ವೈದ್ಯಕೀಯ ಸೇವೆ ಪಡೆಯುವಂತಾಗಲು ಮಂಗಳೂರಿನ ಡಾ ಬಿ ಆರ್ ಅಂಬೇಡ್ಕರ್ ವೃತ್ತದ ಬಳಿಯ ಕೆಎಂಸಿ ಆಸ್ಪತ್ರೆಯು ಹೊರರೋಗಿ ವಿಭಾಗ (OPD) ಸೇವೆಯನ್ನು ಮಾರ್ಚ್ 1, 2026 ರಿಂದ ಪ್ರತಿ ಭಾನುವಾರವೂ ಒದಗಿಸುವುದಾಗಿ ಘೋಷಿಸಿದೆ.
ಇಬ್ಬರ ನಡುವೆ ಮಾರಾಮಾರಿ ನಡೆದು ಇಂಟೆರ್ ಲಾಕ್ ಕಲ್ಲಿನಿಂದ ಪರಸ್ಪರ ಹೊಡೆದು ಗಾಯ ಮಾಡಿಕೊಂಡಿರುವ ಘಟನೆ ಮಂಗಳೂರು ಕಾರ್ಸ್ಟ್ರೀಟ್ ನಲ್ಲಿ ನಡೆದಿದೆ. ಪರಸ್ಪರ ಹಲ್ಲೆ ನಡೆಸುವಾಗ ಅಂಗಡಿಗಳಿಗೆ ಹಾನಿಯಾಗಿದೆ.
ನಗರದ ಬಾಬುಗುಡ್ಡ ಎಂಬಲ್ಲಿ ರೈಲ್ವೆ ಹಳಿ ಮೇಲೆ ಕುಳಿತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ-ವಿದ್ಯಾರ್ಥಿನಿಯ ವೀಡಿಯೋ ಮಾಡಿ, ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದಲ್ಲಿ ತಂದೆ ಮತ್ತು ಮಗನನನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸ್ಟೀವನ್ ಮೊಂತೇರೋ ಮತ್ತು ಆತನ ಪುತ್ರ ಅವಿಲ್ ಬಂಧಿತ ಆರೋಪಿಗಳು.
ಪತ್ನಿ ಅಂದ್ರೆ ಪತಿಗೆ ಇಷ್ಟ. ಹೀಗಾಗಿ ತನ್ನ ಪತ್ನಿಯನ್ನು ಖುಷಿಪಡಿಸಲು ಪತಿ ಏನೆಲ್ಲಾ ಸಾಹಸವನ್ನು ಮಾಡ್ತಾನೆ. ಹೌದು. ಇಲ್ಲೋರ್ವ ವ್ಯಕ್ತಿ ತನ್ನ ಪತ್ನಿ ಗರ್ಭೀಣಿ ಆಗಿದ್ದಕ್ಕೆ ಸೀಮಂತ ಕಾರ್ಯಕ್ರಮಕ್ಕೆ ಸರ್ ಪ್ರೈಸ್ ನೀಡಲು ಹೊಸ ಐಡಿಯಾ ಮಾಡಿದ್ದು ಎಲ್ಲರ ಗಮನ ಸೆಳೆದಿದೆ.
ನಗರದ ಪ್ರತಿಷ್ಠಿತ ಬಿಜೈ ಲೂರ್ಡ್ಸ್ ಸ್ಕೂಲಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಶಾಲೆಯ ಇಮೇಲ್ ವಿಳಾಸಕ್ಕೆ ಬೆದರಿಕೆ ಬಂದಿದ್ದು ಪೊಲೀಸರಿಗೆ ದೂರು ನೀಡಲಾಗಿದೆ.
ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ವತಿಯಿಂದ “ಮರಾಟಿ ಹೋಳಿ ಸಂಭ್ರಮ -2026” ಅನ್ನು ಇದೇ ಮಾರ್ಚ್ 1ರಂದು ಸಂಜೆ 4ಗಂಟೆಗೆ ಬ್ರಹ್ಮಾವರ ಚೇರ್ಕಾಡಿ ಗ್ರಾಮದ ಮುಂಡ್ಕಿನಜೆಡ್ಡು ಆರ್.ಕೆ. ಪಾಟ್ಕರ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಉಮೇಶ್ ಎ. ನಾಯ್ಕ್ ಚೇರ್ಕಾಡಿ ತಿಳಿಸಿದರು.
ಬೆಂಗಳೂರು- ಮಾಡ್ಗಾಂವ್ ಮಾರ್ಗದಲ್ಲಿ ಹೊಸದಾಗಿ ಆರಂಭಿಸಲು ಉದ್ದೇಶಿಸಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲು ಕೆಲ ಲಾಬಿ ನಡೆಯುತ್ತಿದೆ. ಮಂಗಳೂರಿನ ಸಿಟಿ ಒಳಗೆ ರೈಲು ಸಂಚಾರ ಮಾಡುವಂತೆ ಒತ್ತಡ ತರಲಾಗುತ್ತಿದ್ದು, ಇದರಿಂದ ರೈಲಿನ ಸಂಚಾರದಲ್ಲಿ ಬಹಳಷ್ಟು ವಿಳಂಬವಾಗಲಿದೆ. ದೂರದ ಪ್ರಯಾಣಿಕರಿಗೆ ಬಹಳಷ್ಟು ತೊಂದರೆ ಆಗಲಿದೆ ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್ ತಿಳಿಸಿದರು.
ಹಾಲು ಉತ್ಪಾದಕರ ಸಂಘದಲ್ಲಿ ಈ ಹಿಂದೆ ಕಳಪೆ ಗುಣಮಟ್ಟದ ಹಾಲನ್ನು ಸ್ವೀಕರಿಸದೆ ತಿರಸ್ಕಾರ ಮಾಡಲಾಗುತ್ತಿತ್ತು. ಮುಂದಿನ ಹಂತದಲ್ಲಿ ಕೆಳಪೆ ಗುಣಮಟ್ಟದ ಹಾಲನ್ನು ಕೂಡ ಸ್ವೀಕರಿಸಲು ಸಂಘದಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಅವರಿಗೆ ಸರಕಾರದ 5ರೂ. ಅನುದಾನ ಇರುವುದಿಲ್ಲ ಹಾಗೂ ದರದಲ್ಲಿಯೂ ವ್ಯಾತ್ಯಾಸ ಇರುತ್ತದೆ ಎಂದು ದ.ಕ ಹಾಲು ಸಹಕಾರಿ ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದರು.
ಮೂಡೂರು- ಪಡೂರು ಜೋಡುಕರೆ ಕಂಬಳ ಸಮಿತಿ ಬಂಟ್ವಾಳ ಇದರ ವತಿಯಿಂದ ಮಾರ್ಚ್ 7 ಮತ್ತು 8 ರಂದು ನಾವೂರ ಕೂಡಿಬೈಲು ಎಂಬಲ್ಲಿನ ಮೂಡೂರು -ಪಡೂರು ಜೋಡುಕರೆಯಲ್ಲಿ 15 ನೇ ವರ್ಷದ “ಬಂಟ್ವಾಳ ಕಂಬಳ” ನಡೆಯಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಮಾಜಿ ಸಚಿವ, ಕಂಬಳ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ ಹೇಳಿದರು.