ಉಡುಪಿ: ಕಾಂತಾರದ ವರಾಹರೂಪಂ ಖ್ಯಾತಿಯ ಸಾಯಿ ವಿಘ್ನೇಶ್ ಹಾಗೂ ಪತ್ನಿ ಖ್ಯಾತ ಭರತನಾಟ್ಯ ಕಲಾವಿದೆ ಕಾವ್ಯ ಮುರಳೀಧರನ್ ಅವರು ವಿವಾಹದ ಬಳಿಕ ಪ್ರಥಮ ಬಾರಿಗೆ ಕೃಷ್ಣಮಠಕ್ಕೆ ಆಗಮಿಸಿ ಕೃಷ್ಣನ ದರ್ಶನ ಪಡೆದರು.

ಬಳಿಕ ಪರ್ಯಾಯ ಶ್ರೀಪಾದರಿಂದ ಅನುಗ್ರಹ ಪಡೆದು ಚಂದ್ರಶಾಲೆಯಲ್ಲಿ ಪತಿಯ ಸುಂದರ ಹಾಡುಗಾರಿಕೆಗೆ ಅನುಗುಣವಾಗಿ ಭರತನಾಟ್ಯ ಪ್ರದರ್ಶಿಸಿ ಕೃಷ್ಣನಿಗೆ ಸಮರ್ಪಿಸಿ ಭಾವುಕರಾದರು.

ಈ ಸಂದರ್ಭ ದಿವಾನರಾದ ಡಾ.ಕೆ ಉದಯಕುಮಾರ ಸರಳತ್ತಾಯರು ಉಪಸ್ಥಿತರಿದ್ದರು.