Showing 20 of 21629 articles • Page 186 of 1082
ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಗುರುವಾರ ಟ್ರೆಕ್ಕಿಂಗ್ಗೆ ತೆರಳಿದ್ದ ಕೇರಳದ ಮಹಿಳೆ ಶರಣ್ಯ (36) ನಾಪತ್ತೆ ಪ್ರಕರಣ ಸಂಬಂಧ 4ನೇ ದಿನವೂ ಶೋಧ ಕಾರ್ಯ ಮುಂದುವರಿದಿದೆ.
ಪತನಗೊಂಡ ಫೈಟರ್ ಜೆಟ್ ಪೈಲಟ್ ರಕ್ಷಿಸಲು ಅಮೆರಿಕ ನಡೆಸಿದ ಕಾರ್ಯಾಚರಣೆಯ ಸಮಯದಲ್ಲಿ ಐವರು ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆಯಲ್ಲಿ ಸಾರಿಗೆ ವಿಮಾನವೂ ನಾಶವಾಗಿದೆ ಎಂದು ಇರಾನಿನ ಮಾಧ್ಯಮ ವರದಿಯಲ್ಲಿ ಮಾಹಿತಿ ನೀಡಿದೆ.
ಗಂಡು ಮಗು ಬೇಕೆಂಬ ಹಠ ಮತ್ತು ಹೆಣ್ಣು ಮಕ್ಕಳು ಜನಿಸಿದವು ಎಂಬ ದ್ವೇಷಕ್ಕೆ ಅಪ್ಪನೇ ತನ್ನಿಬ್ಬರು ಪುಟ್ಟ ಮಕ್ಕಳನ್ನು ಬಾವಿಗೆ ಎಸೆದು ಕೊಲೆ ಮಾಡಿರುವ ಭೀಕರ ಘಟನೆ ತೆಲಂಗಾಣದ ಕರೀಮನಗರ ಜಿಲ್ಲೆಯಲ್ಲಿ ನಡೆದಿದೆ.
ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 180 ಟನ್ ಮರಳು ದಾಸ್ತಾನನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಶುಕ್ರವಾರ ರಾತ್ರಿ ವಶಕ್ಕೆ ಪಡೆದಿರುವ ಘಟನೆ ತಾಲ್ಲೂಕಿನ ಹೋಟೆಗಾಳಿ ಗ್ರಾಮದ ಕಾಳಿ ನದಿತೀರದಲ್ಲಿ ನಡೆದಿದೆ.
ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಗಾಂಜಾ ಸೇವನೆ ಮಾಡಿದ ಆರೋಪದಲ್ಲಿ ಇಬ್ಬರನ್ನು ಕಾವೂರು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಆರ್ಸಿಬಿ ವರ್ಸಸ್ ಸಿಎಸ್ಕೆ ಪಂದ್ಯದ ಐಪಿಎಲ್ ಟಿಕೆಟ್ ಪಡೆಯಲು ಹೋಗಿ ವಂಚನೆಗೊಳಗಾಗಿ ಟೆಕ್ಕಿಯೊಬ್ಬರು 1.46 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಮಹದೇವಪುರದಲ್ಲಿ ನಡೆದಿದೆ.
ಓವರ್ಟೇಕ್ ಮಾಡುವ ವೇಳೆ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, 20 ಮಂದಿ ಸಣ್ಣಪುಟ್ಟ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆ ಶಿರಾ ಬೈಪಾಸ್ ಬಳಿ ನಡೆದಿದೆ.
ಐಪಿಎಲ್ನ 2 ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಇಂದು ಬೆಂಗಳೂರಿನಲ್ಲಿ ಹಣಾಹಣಿಗೆ ಸಜ್ಜಾಗಿವೆ.
ಕಾಯಕಯೋಗಿ ಪ್ರಾದೇಶಿಕ ದಿನಪತ್ರಿಕೆಯಿಂದ ನೀಡುವ ವಾರ್ಷಿಕ “ಕಾಯಕಯೋಗಿ” ಪ್ರಶಸ್ತಿಯನ್ನು ಪತ್ರಕರ್ತ ಸಿಎಂ ಸುಗಂಧರಾಜುರವರಿಗೆ ನೀಡಿ ಗೌರವಿಸಲಾಯಿತು.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಯನ್ನು ಕೊಂದು ತಲೆ ಮರೆಸಿಕೊಂಡಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಿ.ನರಸೀಪುರ ಮುಖ್ಯ ರಸ್ತೆಯ ಮೇಗಳಾಪುರ ಗ್ರಾಮದಲ್ಲಿ ರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿಯೇ ವ್ಯಕ್ತಿ ಮೃತಪಟ್ಟಿದ್ದಾನೆ.
ಕ್ಷುಲ್ಲಕ ಕಾರಣಕ್ಕೆ ವಿಶೇಷ ಚೇತನನಿಗೆ ಥಳಿಸಿರುವ ಘಟನೆ ತಾಲೂಕಿನ ತಗಡೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ. ಮುದ್ದು ಮಾದೇಗೌಡ (40) ಗಾಯಗೊಂಡಿದ್ದು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೀ ಬ್ರಿಜ್ ಮ್ಯಾರಥಾನ್ ಇದೆಯೆಂಬ ಹೆಸರಿನಲ್ಲಿ ನಕಲಿ ಪೋಸ್ಟ್ ಒಂದನ್ನು ಜಾಲತಾಣದಲ್ಲಿ ಹರಿಯ ಬಿಡಲಾಗಿದ್ದು ಸೈಬರ್ ವಂಚಕರದ್ದೇ ಜಾಲ ಎನ್ನುವ ಶಂಕೆ ವ್ಯಕ್ತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಸಂಭವಿಸಿರುವ ಸರಣಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ತನಿಖೆಯನ್ನು ತೀವ್ರಗೊಳಿಸಿದೆ. ಈ ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ವ್ಯಕ್ತಿಯೊಬ್ಬನ ಭಾವಚಿತ್ರವನ್ನು ಬಿಡುಗಡೆ ಮಾಡಲಾಗಿದ್ದು, ಶಂಕಿತನ ಪತ್ತೆಗಾಗಿ ಸಾರ್ವಜನಿಕರ ಸಹಕಾರವನ್ನು ಕೋರಲಾಗಿದೆ.
12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಯ ಸಂದೇಶ ನೀಡಿದರೆ, ಕೆಂಪೇಗೌಡರು ಸರ್ವ ಜನಾಂಗಗಳನ್ನು ಒಗ್ಗೂಡಿಸಿ ನಾಡು ಕಟ್ಟಿದರು. ಸಮಾನತೆಯ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಚಿಂತನೆ ಅಗತ್ಯ ಎಂದು ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ಚಲನಚಿತ್ರ ನಟ ಜಗ್ಗೇಶ್ ಅಭಿಪ್ರಾಯಪಟ್ಟರು.
ಏನಾದರೂ ಆದರೆ ರಾಜಕಾರಣಿಗಳು ಬರ್ತಾರೆ. ಆದರೆ ನಮ್ಮ ಸಮಸ್ಯೆ ಯಾರಿಗೂ ಕಾಣುವುದಿಲ್ಲ. ಗ್ಯಾಸ್ ಸಮಸ್ಯೆಯಿಂದ ಇಷ್ಟೊಂದು ಸಮಸ್ಯೆ ಆಗಿದೆ. ಜಿಲ್ಲಾಧಿಕಾರಿ, ಸಂಸದರು ನಮ್ಮ ಸಮಸ್ಯೆಯನ್ನ ಸರಿಪಡಿಸಬೇಕು. ಪಂಪ್ಗಳಲ್ಲಿ ಗ್ಯಾಸ್ ಖಾಲಿಯಾಗಿದ್ದು, ದುಡಿಮೆ ಇಲ್ಲದಂತೆ ಆಗಿದೆ.
ಉಡುಪಿಯ ಸಿಎಸ್ಐ ಲೊಂಬಾರ್ಡ್ ಮೆಮೋ ರಿಯಲ್(ಮಿಷನ್) ಆಸ್ಪತ್ರೆಯ ಪೂರ್ಣ ಪ್ರಮಾಣದ ಮೊದಲ ಆರೋಗ್ಯ ಕೇಂದ್ರ(ಪಾಲಿ ಕ್ಲಿನಿಕ್) ಕಟಪಾಡಿಯ ಬಸ್ ನಿಲ್ದಾಣದ ಬಳಿ ಶನಿವಾರ ಉದ್ಘಾಟನೆಗೊಂಡಿತು.
ಸರಳಬೆಟ್ಟುವಿನ ಉಮಾಮಹೇಶ್ವರಿ ದೇವಸ್ಥಾನದ ಪಕ್ಕದ ಮನೆಯೊಂದರಲ್ಲಿ ಆಟೋ ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿದ್ಯೆ ಕಲಿಯಲು ಬರುವ ಪವಿತ್ರ ತಾಣಗಳು ಇಂದು ರಣರಂಗವಾಗುತ್ತಿವೆ. ಮಂಗಳೂರಿನ ಪ್ರತಿಷ್ಠಿತ ಪಿ.ಎ. ಕಾಲೇಜಿನಲ್ಲಿ (P.A. College) ಪ್ರತಿ ತಿಂಗಳು ಐದಾರು ಬಾರಿ ರಾಗಿಂಗ್ ಮತ್ತು ಗುಂಪು ಘರ್ಷಣೆಗಳು ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.