ಚೆನ್ನೈ: ಚೆನ್ನೈನ ವೆಲಚೇರಿಯಲ್ಲಿ ಪತಿ ವಿಚ್ಛೇದನ ನೀಡಲು ಮುಂದಾಗಿರುವುದಕ್ಕೆ ಬೇಸರಗೊಂಡ ಹೆಂಡತಿ ಫ್ಲೈಓವರ್ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಶೋಭಾ (40) ಎಂದು ಗುರುತಿಸಲಾಗಿದೆ.
ಶೋಭಾ ವೃತ್ತಿಯಲ್ಲಿ ಟೆಕ್ಕಿಯಾಗಿದ್ದು, ಬೇಸರಗೊಂಡಿದ್ದ ಆಕೆ ಸ್ಕೂಟರ್ನಲ್ಲಿ ವೆಲಚೇರಿ ಫ್ಲೈಓವರ್ ಬಳಿ ಬಂದಿದ್ದಾಳೆ. ಫ್ಲೈಓವರ್ನ ತಡೆಗೋಡೆ ಏರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ದಂಪತಿಗಳು ತಾಂಬರಂ ಸಮೀಪದ ಸೆಂಬಕ್ಕಂನಲ್ಲಿ ವಾಸಿಸುತ್ತಿದ್ದರು. ನಾಲ್ಕು ವರ್ಷದ ಹಿಂದೆ ಶೋಭಾಗೆ ಕಾರ್ತಿಕ್ (33) ಎಂಬವರ ಜೊತೆ ವಿವಾಹವಾಗಿತ್ತು. ಈ ದಂಪತಿಗೆ 3 ವರ್ಷದ ಮಗನಿದ್ದಾನೆ.
ದಂಪತಿ ನಡುವೆ ಭಿನ್ನಾಬಿಪ್ರಾಯವಿದ್ದ ಕಾರಣ ಕಾರ್ತಿಕ್ ಡಿವೋರ್ಸ್ ನೀಡಲು ಮುಂದಾಗಿದ್ದನು. ಶೋಭಾ ಆತನ ಜೊತೆಗೆ ರಾಜಿ ಮಾಡಿಕೊಳ್ಳಲು ಯತ್ನಿಸಿದಾಗ ಅವನು ನಿರಾಕರಿಸಿದನು. ಇದರಿಂದ ಮನನೊಂದ ಶೋಭಾ ಫ್ಲೈಓವರ್ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821