Bengaluru 23°C
Ad

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: 4 ಯೂಟ್ಯೂಬರ್​ಗಳ ದುರ್ಮರಣ

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ  ನಡೆದಿದೆ. ಈ ಅಪಘಾತದಲ್ಲಿ 4 ಯೂಟ್ಯೂಬರ್​ಗಳು ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶ: ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ  ನಡೆದಿದೆ.

ಈ ಅಪಘಾತದಲ್ಲಿ 4 ಯೂಟ್ಯೂಬರ್​ಗಳು ಸಾವನ್ನಪ್ಪಿದ್ದು, ಅವರನ್ನು ಲಕ್ಕಿ, ಸಲ್ಮಾನ್, ಶಾರುಖ್ ಮತ್ತು ಶಾನವಾಜ್ ಎಂದು ಗುರುತಿಸಲಾಗಿದೆ.

ಯೂಟ್ಯೂಬರ್‌ಗಳು ಹುಟ್ಟುಹಬ್ಬದ ಕಾರ್ಯಕ್ರಮದಿಂದ ಮನೆಗೆ ಹೋಗುತ್ತಿದ್ದಾಗ ಅವರ ವಾಹನವು ಎದುರು ದಿಕ್ಕಿನಿಂದ ಬರುತ್ತಿದ್ದ ಬೊಲೆರೊ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳದಲ್ಲಿ ಜಮಾಯಿಸಿದ ಜನರು ಯುವಕರನ್ನು ಸಿಎಚ್‌ಸಿ ಗಜರೌಲಾ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.ಮೃತರನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ನಾಲ್ವರು ಮೃತ ಯುವಕರು ಯೂಟ್ಯೂಬ್‌ನಲ್ಲಿ ರೌಂಡ್ 2 ವರ್ಲ್ಡ್ ಚಾನೆಲ್‌ಗಾಗಿ ಕಂಟೆಂಟ್ ಕ್ರಿಯೇಟ್​ ಮಾಡುತ್ತಿದ್ದರು.

Ad
Ad
Nk Channel Final 21 09 2023
Ad