ವಾಷಿಂಗ್ಟನ್: ಅಮೆರಿಕದ ವರ್ಜಿನಿಯಾದ ಚೆಸಾಪೀಕ್ನ ವಾಲ್ಮಾರ್ಟ್ ನಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೆಸಾಪೀಕ್ ಪೊಲೀಸರ ಪ್ರಕಾರ, ಮಂಗಳವಾರ ರಾತ್ರಿ 10.12 ಕ್ಕೆ ಗುಂಡಿನ ದಾಳಿಯ ಬಗ್ಗೆ ವರದಿ ಮಾಡುವ ಕರೆ ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಸ್ಟೋರ್ ಮ್ಯಾನೇಜರ್ ಎಂದು ನಂಬಲಾದ ಶಂಕಿತನು ಗುಂಡು ಹಾರಿಸಿ ನಂತರ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಅಂಗಡಿಯ ಒಳಗೆ ಗುಂಡಿನ ದಾಳಿ ನಡೆದಿದೆ ಎಂದು ನಂಬಲಾಗಿದೆ ಮತ್ತು ಶಂಕಿತನು ಏಕಾಂಗಿಯಾಗಿ ಕಾರ್ಯನಿರ್ವಹಿಸಿದ್ದಾನೆ ಎಂದು ವಕ್ತಾರರು ತಿಳಿಸಿದ್ದಾರೆ.
ದಾಳಿಯ ಹಿಂದಿನ ಉದ್ದೇಶವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.