News Karnataka Kannada
Monday, May 13 2024
ವಿದೇಶ

ವಾಷಿಂಗ್ಟನ್: ಯುಎಸ್ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಶೂಟೌಟ್, ವಿದ್ಯಾರ್ಥಿ ಸಾವು

ಅಮೆರಿಕದ ಫ್ಯಾಮಿಲಿ ಟುಗೆದರ್ ಕಾರ್ಯಕ್ರಮವೊಂದರಲ್ಲಿ ಅಪರಿಚಿತ ದುಷ್ಕರ್ಮಿಗಳು 11 ಮಕ್ಕಳ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿದೆ.
Photo Credit : Pixabay

ವಾಷಿಂಗ್ಟನ್: ಅಮೆರಿಕದ ನ್ಯೂ ಮೆಕ್ಸಿಕೊ ರಾಜ್ಯದ ಅತಿದೊಡ್ಡ ನಗರ ಅಲ್ಬುಕರ್ಕ್ ನ ವಿಶ್ವವಿದ್ಯಾಲಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ವಿದ್ಯಾರ್ಥಿ ಮೃತಪಟ್ಟು, ಮತ್ತೊಬ್ಬ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂ ಮೆಕ್ಸಿಕೋ ವಿಶ್ವವಿದ್ಯಾಲಯದಲ್ಲಿ (ಯುಎನ್ಎಂ) ಶನಿವಾರ ಈ ಘಟನೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ

19 ವರ್ಷದ ಮೃತ ವ್ಯಕ್ತಿ ಯುಎನ್ಎಂ ವಿದ್ಯಾರ್ಥಿಯಾಗಿದ್ದು, ಗಾಯಗೊಂಡಿರುವ 21 ವರ್ಷದ ಯುವಕ ನ್ಯೂ ಮೆಕ್ಸಿಕೋ ಸ್ಟೇಟ್ ಯೂನಿವರ್ಸಿಟಿಯ (ಎನ್ಎಂಎಸ್ಯು) ಬಾಸ್ಕೆಟ್ಬಾಲ್ ಆಟಗಾರ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಯುಎನ್ಎಂ ಪ್ರಕಾರ, ಅದರ ಮುಖ್ಯ ಕ್ಯಾಂಪಸ್ ನಲ್ಲಿರುವ ವಿದ್ಯಾರ್ಥಿ ವಸತಿನಿಲಯವಾದ ಅಲ್ವಾರಾಡೋ ಹಾಲ್ ಬಳಿ ಈ ಗುಂಡಿನ ದಾಳಿ ನಡೆದಿದೆ.

ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ಸಂತ್ರಸ್ತ ಮತ್ತು ಗಾಯಗೊಂಡ ಆಟಗಾರನ ನಡುವೆ ವಾಗ್ವಾದ ನಡೆದಿದ್ದು, ಇಬ್ಬರಿಗೂ ಗುಂಡೇಟು ತಗುಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಿಶ್ವವಿದ್ಯಾಲಯಗಳು ಮತ್ತು ಅಲ್ಬುಕರ್ಕ್ ಪೊಲೀಸರು ಗುಂಡಿನ ದಾಳಿಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು