ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರ ಕುಟುಂಬಕ್ಕೆ ಭಾರಿ ಭದ್ರತೆ ಒದಗಿಸಲಾಗಿರುತ್ತದೆ. ಇಂತಹ ಅತಿ ಭದ್ರತೆಯ ಕುಟುಂಬಕ್ಕೆ ಈಗ ಕಂಟಕ ಎದುರಾಗಿದೆ. ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರ ಮೊಮ್ಮಗಳು ನವೋಮಿ ಬೈಡನ್ ಅವರಿದ್ದ ಕಾರಿನ ಮೇಲೆ ಸೀಕ್ರೆಟ್ ಸರ್ವಿಸ್ ಏಜೆಂಟ್ಗಳೇ ಗುಂಡು ಹಾರಿಸಿದ್ದಾರೆ.
ನವೋಮಿ ಇದ್ದ ಕಾರಿನ ಗಾಜನ್ನು ಒಡೆಯಲು ಮೂವರು ಯತ್ನಿಸುತ್ತಿದ್ದರಿಂದ ಆಕೆಯನ್ನು ರಕ್ಷಿಸುವ ಸಲುವಾಗಿ ಕಾರಿನ ಮೇಲೆ ಗುಂಡು ಹಾರಿಸಿದ್ದಾರೆ.
ಅಧಿಕಾರಿಗಳು ತನಿಖೆಯ ವಿವರಗಳನ್ನು ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ ಎಂದು ವರದಿ ಹೇಳಿದೆ. ಏಜೆಂಟ್ ಗುಂಡು ಹಾರಿಸಿದ್ದಾರೆ. ಆದರೆ ಗುಂಡಿನ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಸೀಕ್ರೆಟ್ ಸರ್ವಿಸ್ ಹೇಳಿಕೆಯಲ್ಲಿ ತಿಳಿಸಿದೆ. ಇದಾದ ನಂತರ ಮೂವರು ಕೆಂಪು ಕಾರಿನಲ್ಲಿ ಓಡಿ ಹೋಗುತ್ತಿರುವುದು ಕಂಡು ಬಂದಿದೆ. ಅವರನ್ನು ಹುಡುಕಲು ಮೆಟ್ರೋಪಾಲಿಟನ್ ಪೊಲೀಸರಿಗೆ ತಿಳಿಸಲಾಗಿದೆ ಎಂದು ಸೀಕ್ರೆಟ್ ಸರ್ವಿಸ್ ಹೇಳಿದೆ.