ವಾಷಿಂಗ್ಟನ್: ಇಸ್ರೇಲ್ ಹಮಾಸ್ ಸಂಘರ್ಷ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಜೊ ಬಿಡೆನ್ ನೀಡಿರುವ ಹೇಳಿಕೆ ನಿಜಕ್ಕೂ ಆಘಾತಕಾರಿಯಾಗಿದೆ.
ಹಮಾಸ್ ಉಗ್ರರು ಶಿಶುಗಳ ತಲೆಗಳನ್ನು ಕತ್ತರಿಸುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿಕೆ ನೀಡಿದ್ದಾರೆ. ಜೋ ಬೈಡನ್ ಅಕ್ಟೋಬರ್ 11 ರಂದು ಯಹೂದಿಗಳನ್ನುದ್ದೇಶಿಸಿ ವೈಟ್ಹೌಸ್ನಲ್ಲಿ ಮಾತನಾಡಿದ್ದಾರೆ.
ಭಯೋತ್ಪಾದಕರು ಮಕ್ಕಳ ಶಿರಚ್ಛೇದ ಮಾಡಿದ ಚಿತ್ರಗಳನ್ನು ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ. ಈ ಶನಿವಾರ ಇಸ್ರೇಲ್ ನಗರಗಳ ಮೇಲೆ ನಡೆದ ಹಠಾತ್ ದಾಳಿಯಲ್ಲಿ ಕನಿಷ್ಠ 14 ಅಮೆರಿಕನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಬೈಡನ್ ಖಚಿತಪಡಿಸಿದ್ದಾರೆ. ಹಮಾಸ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಕೂಡ ದಾಳಿ ನಡೆಸಿದ ನೂರಾರು ಉಗ್ರರನ್ನು ಸದೆಬಡಿದಿದೆ ಹಾಗೂ ಗಾಜಾಗಡಿಯನ್ನು ವಾಪಾಸ್ ಪಡೆದಿದೆ.
ದಾಳಿಗಳು ಮತ್ತು ಪ್ರತೀಕಾರವು ಈಗಾಗಲೇ 4,000 ಕ್ಕೂ ಹೆಚ್ಚು ಜೀವಗಳನ್ನು ಬಲಿಪಡೆದಿದೆ. ಜೋ ಬೈಡನ್ ಹೇಳಿಕೆಯ ಕುರಿತು ವೈಟ್ ಹೌಸ್ ಸ್ಪಷ್ಟೀಕರಣ ನೀಡಿದ್ದು, ಶಿಶಿಗಳ ತಲೆ ಕತ್ತರಿಸಿರುವ ಫೋಟೊವಾಗಲಿ ಅಥವಾ ವಿಡಿಯೋವಾಗಲಿ ಬೈಡನ್ ನೋಡಿಲ್ಲ ಆದರೆ ಇಸ್ರೇಲ್ ಮಾಧ್ಯಮಗಳ ವರದಿಗಳ ಬಗ್ಗೆ ಮಾತನಾಡಿದ್ದಾರೆ ಎಂದಿದೆ.