ವಾಷಿಂಗ್ಟನ್: 2020ರ ಚುನಾವಣೆಯಲ್ಲಿ ಅಧಿಕಾರ ದುರ್ಬಳಕೆ, ಅಕ್ರಮ ಆರೋಪ ಮೇಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸಲಾಗಿದೆ. 2020ರ ಅಧ್ಯಕ್ಷೀಯ ಚುನಾವಣೆ ವೇಳೆ ಅಧಿಕಾರ ದುರ್ಬಳಕೆ ಆರೋಪ ಕೇಳಿಬಂದಿತ್ತು. ಪಿತೂರಿ, ವಂಚನೆ ಯತ್ನ ಸೇರಿದಂತೆ 13 ಪ್ರಕರಣಗಳು ದಾಖಲಾಗಿದ್ದವು.
ಈ ಆರೋಪಗಳ ಮೇರೆಗೆ ಜಾರ್ಜಿಯಾ ಪೊಲೀಸರು, ಔಪಚಾರಿಕವಾಗಿ ಟ್ರಂಪ್ರನ್ನು ಬಂಧಿಸಿದ್ದು, ಸದ್ಯ ಅಟ್ಲಾಂಟಾದ ಫುಲ್ಟನ್ ಕೌಂಟಿ ಜೈಲಿನಲ್ಲಿದ್ದಾರೆ.