ಟೆಹ್ರಾನ್: ಗಾಜಾದಲ್ಲಿ ಇಸ್ರೇಲ್ ನಡೆಸಿದ ಯುದ್ಧ ಅಪರಾಧಗಳಲ್ಲಿ ಅಮೆರಿಕವು ಖಚಿತವಾದ ಸಹಚರ ಎಂದು ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಸೆಯ್ಯದ್ ಅಲಿ ಖಮೇನಿ ಹೇಳಿದ್ದಾರೆ.
ಪಾಶ್ಚಿಮಾತ್ಯ ನಾಯಕರ ಇತ್ತೀಚಿನ ಇಸ್ರೇಲ್ ಪ್ರವಾಸಗಳನ್ನು ಉಲ್ಲೇಖಿಸಿ ಖಮೇನಿ ಅವರು ಬುಧವಾರ ಈ ಹೇಳಿಕೆ ನೀಡಿದ್ದಾರೆ. ಆದರೆ ಪ್ಯಾಲೆಸ್ತೀನ್ಗೆ ಗೆಲುವು ಖಂಡಿತವಾಗಿಯೂ ದೊರೆಯುತ್ತದೆ ಎಂದು ಹೇಳಿದ ಖಮೇನಿ, ಅಪರಾಧಿಗಳ ಎದುರು ಇಸ್ಲಾಮಿಕ್ ರಾಜ್ಯಗಳು ನಿಷ್ಕ್ರಿಯತೆ ತೋರಬಾರದು ಎಂದರು.
ಭವಿಷ್ಯದಲ್ಲಿ ಜಗತ್ತು ಪ್ಯಾಲೆಸ್ಟೀನಿಯಾದವರಿಗೆ ಸೇರಿರುತ್ತದೆ. ಜಿಯೋನಿಸ್ಟ್ ಆಡಳಿತಕ್ಕಲ್ಲ. ಗಾಜಾದ ಜನರು ನಿಜವಾಗಿಯೂ ತುಳಿತಕ್ಕೊಳಗಾಗಿದ್ದಾರೆ, ಮತ್ತು ಈ ನಿರ್ದಯ ಮತ್ತು ರಕ್ತಪಿಪಾಸುಗಳು ಬಾಂಬ್ ಸ್ಫೋಟದಲ್ಲಿ ಸಾವಿರಾರು ಜನರನ್ನು ಕೊಲ್ಲುತ್ತಿದ್ದಾರೆ. ಈ ದಾಳಿಯಲ್ಲಿ ಪಾಪಕೃತ್ಯದ ನೈಜ ಸಹಚರ ಅಮೆರಿಕ. ಮಕ್ಕಳು, ರೋಗಿಗಳು, ಮಹಿಳೆಯರನ್ನು ಅಮೆರಿಕ ಹೇಗೆ ನಡೆಸಿಕೊಂಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಅವರು ಹೇಳಿದ್ದಾರೆ.