ದೋಹಾ: ಇಸ್ರೇಲ್ ಗಾಜಾವನ್ನು ಪ್ರವೇಶಿಸಲು ನಿರ್ಧರಿಸಿದರೆ, ನಾವು ಇಸ್ರೇಲ್ ಅನ್ನು ಸೈನಿಕರ ಸ್ಮಶಾನವಾಗಿ ಪರಿವರ್ತನೆ ಮಾಡುತ್ತೇವೆ ಎಂದು ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮಿರಾಬ್ದೊಲ್ಲಾಹಿಯಾನ್ ಹೇಳಿದ್ದಾರೆ.
ಕತಾರ್ನ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಭೇಟಿಯಾದ ನಂತರ ಅವರಿಂದ ಈ ಪ್ರತಿಕ್ರಿಯೆ ಬಂದಿದೆ. ಯುದ್ಧದ ವ್ಯಾಪ್ತಿ ವಿಸ್ತರಿಸಿದರೆ, ಅಮೇರಿಕಾಕ್ಕೂ ಭಾರಿ ನಷ್ಟ ಉಂಟಾಗುತ್ತದ ಎಂದು ಹೇಳಿದ್ದಾರೆ. ಈ ನಡುವೆ ಇಸ್ರೇಲ್ ಉತ್ತರ ಗಾಜಾದ 1.1 ಮಿಲಿಯನ್ ನಿವಾಸಿಗಳನ್ನು ದಕ್ಷಿಣಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದ್ದು ಸಾವಿರಾರು ಪ್ಯಾಲೆಸ್ಟೀನಿಯನ್ನರು ಸ್ಥಳಾಂತರಗೊಂಡಿದ್ದಾರೆ.