News Karnataka Kannada
Friday, May 10 2024
ವಿದೇಶ

ಗಾಜಾ ಪಟ್ಟಿಯಲ್ಲಿ 40 ಎಳೆಯ ಮಕ್ಕಳ ಕೊಂದ ಹಮಾಸ್‌ ಉಗ್ರರು

Hamas militants kill 40 young children in Gaza Strip
Photo Credit : News Kannada

ಇಸ್ರೇಲ್‌ಗೆ ನುಗ್ಗಿರಕ್ತಪಾತ ಹರಿಸಿರುವ ಹಮಾಸ್ ಉಗ್ರರ ಭಯಾನಕ ಕೃತ್ಯಕ್ಕೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಹಮಾಸ್ ಉಗ್ರರು ಎಷ್ಟು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಇಸ್ರೇಲ್‌ನಲ್ಲಿದ್ದ ಎಳೆಯ ಮಕ್ಕಳನ್ನು ಅಮಾನುಷವಾಗಿ ಕಿಡ್ನ್ಯಾಪ್ ಮಾಡಿ ಗಾಜಾ ಪಟ್ಟಿಗೆ ಕರೆದೊಯ್ದಿದ್ದಾರೆ. ಗಾಜಾ ಪಟ್ಟಿಯಲ್ಲಿ ಎಳೆಯ 40 ಮಕ್ಕಳ ತಲೆ ಕಡಿದು ಹತ್ಯೆ ಮಾಡಿ ಪೈಶಾಚಿಕತೆ ಮೆರೆದಿದ್ದಾರೆ.

ಎಳೆಯ ಮಕ್ಕಳ ತಲೆ ಕಡಿದು ಕೊಂದಿರೋ ಹಮಾಸ್ ಉಗ್ರರ ಕೃತ್ಯಕ್ಕೆ ಇಡೀ ಜಗತ್ತೇ ಬೆಚ್ಚಿ ಬಿದ್ದಿದೆ. ಮಕ್ಕಳ ಜೊತೆಗೆ ಗರ್ಭಿಣಿಯರನ್ನು ಹಮಾಸ್‌ ಉಗ್ರರು ಬಿಟ್ಟಿಲ್ಲ. ಇಸ್ರೇಲ್ ನಾಗರಿಕರನ್ನು ಸಜೀವವಾಗಿ ದಹನ ಮಾಡಿದ್ದಾರೆ ಎನ್ನಲಾಗಿದೆ. ಮಾಸ್ ಉಗ್ರರು ಇಸ್ರೇಲ್‌ ಮಕ್ಕಳನ್ನು ಕೊಂದಿರುವ ಬಗ್ಗೆ ಇಸ್ರೇಲ್-ಗಾಜಾ ಗಡಿಯಿಂದ ಮಾಧ್ಯಮವೊಂದು ವರದಿ ಮಾಡಿದೆ.

ಅತ್ತ ಹಿಂದಿ ಕಿರುತೆರೆಯ ನಾಗಿನ್ ಧಾರಾವಾಹಿಗಳಲ್ಲಿ ನಟಿಸಿ ಗಮನ ಸೆಳೆದಿರುವ ಮಧುರಾ ನಾಯ್ಕ್ ಅವರ ಕುಟುಂಬ ಯುದ್ಧಕ್ಕೆ ಬಲಿಯಾಗಿದೆ. ನನ್ನ ಸಹೋದರಿ ಹಾಗೂ ಸೋದರ ಮಾವ ಭೀಕರವಾಗಿ ಕೊಲೆಯಾಗಿದ್ದಾರೆ ಅಂತ ಖುದ್ದು ನಟಿ ಸೋಷಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಸಂಬಂಧಿಕರನ್ನು ಅವರ ಮಕ್ಕಳ ಕಣ್ಣುಗಳ ಮುಂದೆಯೇ ಕೊಲ್ಲಲಾಗಿದೆ. ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಗುರಿಯಾಗಿಸಿಕೊಂಡು ಹತ್ಯೆ ನಡೀತಿದೆ ಅಂತಾ ಹೇಳ್ಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು