News Karnataka Kannada
Thursday, May 16 2024
ವಿದೇಶ

ಭೂಕಂಪನಕ್ಕೆ ನಲುಗಿದ ತೈವಾನ್‌: 25 ವರ್ಷಗಳಲ್ಲೇ ಶಕ್ತಿ ಶಾಲಿ ಕಂಪನ

Tsunami
Photo Credit : NewsKarnataka

ಟೋಕಿಯೋ: ತೈವಾನದಲ್ಲಿ ಇಂದು 7.5 ತೀವ್ರತೆಯ ಭೂಕಂಪನವಾಗಿದೆ. ಇದರ ಕಂಪನವನ್ನು ನೆರೆಯ ದೇಶಗಳಾದ ಜಪಾನ್‌, ಫಿಲಿಪೈನ್ಸ್‌ನಲ್ಲೂ ಆಗಿದೆ. ತೈವಾನನ ಅನೇಕ ನಗರಗಳಲ್ಲಿ ಭೂಕಂಪನವಾಗಿದ್ದು, ಹಲವು ಕಟ್ಟಡಗಳು ಧರಾಶಾಹಿ ಆಗಿವೆ. ಕಳೆದ 25 ವರ್ಷಗಳಲ್ಲಿ ಸಂಭವಿಸಿದ ಶಕ್ತಿ ಶಾಲಿ ಭೂಕಂಪ ಇದಾಗಿದೆ ಎಂದು ತಿಳಿದು ಬಂದಿದೆ.

ಜಪಾನ್‌ನ ಹವಾಮಾನ ಇಲಾಖೆಯು, ಮಿಯಾಕೊಜಿಮಾ ದ್ವೀಪ ಸೇರಿದಂತೆ ಜಪಾನ್‌ನ ದೂರದ ದ್ವೀಪಗಳಲ್ಲಿ 10 ಅಡಿ ಎತ್ತರದವರೆಗೂ ಸುನಾಮಿ ಅಲೆಗಳು ಸಿಡಿಯುವ ಎಚ್ಚರಿಕೆ ನೀಡಿದೆ. ಭೂಕಂಪನದ ಬಳಿಕ ಯೊನಗುನಿ ದ್ವೀಪದಲ್ಲಿ 1 ಅಡಿ ಎತ್ತರದವರೆಗೂ ಅಲೆಗಳು ಎದ್ದಿವೆ.

ತೈವಾನ್‌ನಲ್ಲಿ ಅಧಿಕಾರಿಗಳು ಜನರ ಮೊಬೈಲ್‌ಗಳಿಗೆ ಮೆಸೇಜ್‌ಗಳ ಮೂಲಕ ಸುನಾಮಿ ಎಚ್ಚರಿಕೆ ರವಾನಿಸಿದ್ದಾರೆ. “ಕರಾವಳಿ ಪ್ರದೇಶಗಳ ಜನರು ಬಹಳ ಎಚ್ಚರಿಕೆಯಿಂದ ಇರುವಂತೆ ಮತ್ತು ಕಟ್ಟುನಿಟ್ಟಾದ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಹಾಗೂ ಹಠಾತ್ ಅಲೆಗಳ ಹೆಚ್ಚಳದಿಂದ ಎದುರಾಗಬಹುದಾಗಿ ಅಪಾಯಗಳ ಬಗ್ಗೆ ಜಾಗ್ರತೆ ವಹಿಸುವಂತೆ ನೆನಪಿಸಲಾಗುತ್ತಿದೆ” ಎಂದು ಹೇಳಿದ್ದಾರೆ.

ತೈವಾನ್‌ನ ಉದ್ದಗಲಕ್ಕೂ ಆರಂಭಿಕ ಭೂಕಂಪನದ ಅನುಭವ ಉಂಟಾಗಿದೆ. ತೈಪೆಯ ಉತ್ತರ ಭಾಗದ ಪಿಂಗ್ಟುಂಗ್ ಕೌಂಟಿಯಲ್ಲಿ ನೆಲ ಅದುರುವ ಅನುಭವವನ್ನು ಎಎಫ್‌ಪಿ ವರದಿಗಾರರು ಹಂಚಿಕೊಂಡಿದ್ದಾರೆ.

ಇನ್ನು “ಇದು ಕಳೆದ 25 ವರ್ಷಗಳಲ್ಲಿಯೇ ಅತ್ಯಂತ ಪ್ರಬಲ ಭೂಕಂಪನ” ಎಂದು ತೈಪೆಯ ಕೇಂದ್ರ ಹವಾಮಾನ ಆಡಳಿತದ ಭೂಕಂಪ ಕೇಂದ್ರದ ನಿರ್ದೇಶಕ ವು ಚಿಯೆನ್- ಫು ತಿಳಿಸಿದ್ದಾರೆ. 1999ರ ಸೆಪ್ಟೆಂಬರ್‌ನಲ್ಲಿ ಉಂಟಾಗಿದ್ದ 7.6 ತೀವ್ರತೆಯ ಭೂಕಂಪನವು 2,400 ಜನರ ಜೀವ ಬಲಿ ತೆಗೆದುಕೊಂಡಿತ್ತು. ಇದು ದ್ವೀಪ ರಾಷ್ಟ್ರದ ಇತಿಹಾಸದಲ್ಲಿಯೇ ಅತ್ಯಂತ ಭೀಕರ ನೈಸರ್ಗಿಕ ಅವಘಡ ಎನಿಸಿದೆ.

ಅಲ್ಲದೆ ಈ ಭೂಕಂಪನವು ಭೂಮಿಯ ಮೇಲ್ಪದರಕ್ಕೆ ಬಹಳ ಸಮೀಪದಲ್ಲಿ ಉಂಟಾಗಿದೆ. ಮುಂದಿನ ಮೂರು ದಿನಗಳಲ್ಲಿ 6.5 ರಿಂದ 7ರ ತೀವ್ರತೆವರೆಗಿನ ಮತ್ತಷ್ಟು ಭೂಕಂಪನಗಳು ಉಂಟಾಗುವ ಸಾಧ್ಯತೆ ಇದೆ ಎಂದು ವು ಚಿಯೆನ್ ತಿಳಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು