ಲೆಬನಾನ್: ದಕ್ಷಿಣ ಗ್ರಾಮ ಅಲ್ಮಾ ಅಲ್-ಶಾಬ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಲೆಬನಾನ್ ಛಾಯಾಗ್ರಾಹಕರೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇತರ ಆರು ವರದಿಗಾರರು ಗಾಯಗೊಂಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಪತ್ರಕರ್ತರನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ಇಸ್ರೇಲಿ ಪಡೆಗಳು ದಾಳಿ ನಡೆಸಿದ್ದು, ರಾಯಿಟರ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಲೆಬನಾನ್ ಛಾಯಾಗ್ರಾಹಕ ಇಸಾಮ್ ಅಬ್ದಲ್ಲಾ ಅವರು ಸಾವನ್ನಪ್ಪಿದ್ದಾರೆ ಮತ್ತು ಏಜೆನ್ಸ್ ಫ್ರಾನ್ಸ್-ಪ್ರೆಸ್ (ಎಎಫ್ಪಿ) ಮತ್ತು ಅಲ್-ಜಜೀರಾ ಟಿವಿ ಚಾನೆಲ್ ಸೇರಿದಂತೆ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಇತರ ಆರು ವರದಿಗಾರರು ಗಾಯಗೊಂಡಿದ್ದರೆ ಎಂದು ವರದಿಯಾಗಿದೆ.