News Karnataka Kannada
Thursday, May 02 2024
ವಿದೇಶ

19 ವರ್ಷಗಳಲ್ಲಿ ಮೊದಲ ಬಾರಿಗೆ ಬೀಜಿಂಗ್‌ ನಲ್ಲಿ ಜನಸಂಖ್ಯೆ ಕುಸಿತ

Population decline in Beijing for first time in 19 years
Photo Credit : News Kannada

ಬೀಜಿಂಗ್: 19 ವರ್ಷಗಳಲ್ಲಿ ಮೊದಲ ಬಾರಿಗೆ 2022 ರಲ್ಲಿ ಬೀಜಿಂಗ್ ಪಟ್ಟಣದಲ್ಲಿ ಜನಸಂಖ್ಯೆ ಕುಸಿತವಾಗಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಅಧಿಕೃತ ಡೇಟಾವನ್ನು ಉಲ್ಲೇಖಿಸಿ, ಗುರುವಾರ ಸಿಎನ್‌ಎನ್‌ ವರದಿ ಮಾಡಿದ್ದು, ಚೀನಾದ ರಾಜಧಾನಿಯ ಶಾಶ್ವತ ನಿವಾಸಿಗಳ ಜನಸಂಖ್ಯೆಯು 2021 ರಲ್ಲಿ 21.88 ಮಿಲಿಯನ್‌ನಿಂದ 2022 ರಲ್ಲಿ 21.84 ಮಿಲಿಯನ್‌ಗೆ ಇಳಿದಿದೆ ಎಂದು ಹೇಳಿದೆ. ಏತನ್ಮಧ್ಯೆ, ಬೀಜಿಂಗ್‌ನಲ್ಲಿ ವಲಸಿಗರ ಸಂಖ್ಯೆಯೂ ಇದೇ ಅವಧಿಯಲ್ಲಿ ಕಡಿಮೆಯಾಗಿದೆ. ಚೀನಾದ ರಾಷ್ಟ್ರೀಯ ಜನಸಂಖ್ಯೆಯು 1961 ರ ಮಹಾ ಕ್ಷಾಮದ ನಂತರ ಮೊದಲ ಬಾರಿಗೆ ಕಳೆದ ವರ್ಷ ಕುಗ್ಗಿರುವುದು ಅಂಕಿ ಅಂಶಗಳಿದ ದೃಢಪಟ್ಟಿದೆ.

1980 ರ ದಶಕದಲ್ಲಿ ಚೀನಾ ಪರಿಚಯಿಸಿದ ಒಂದು ಮಗುವಿನ ನೀತಿಯ ಪರಿಣಾಮದಿಂದ ಯುವಕರಲ್ಲಿ ಮದುವೆ ಮುಂದೂಡುವಿಕೆ, ಲಿಂಗ ಅಸಮಾನತೆ, ದುಬಾರಿ ವೆಚ್ಚ ಇವುಗಳು ಮನೆ ಮಾಡಿದ್ದು, ಇದರಿಂದ ಜನಸಂಖ್ಯೆಯ ಇಳಿತವಾಗಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು