ಲಾಹೋರ್: ಪಾಕ್ ಸರ್ಕಾರ ಸಾಕಷ್ಟು ಪೆಟ್ರೋಲ್ ಸಂಗ್ರಹವಿದೆ ಎಂದು ಆಗಾಗ್ಗೆ ಹೇಳಿಕೆ ನೀಡುತ್ತಿದೆ. ಅಲ್ಲದೆ ಪೆಟ್ರೋಲ್ ಅನ್ನು ಅಕ್ರಮವಾಗಿ ಸಂಗ್ರಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡುತ್ತಿದೆ. ಆದರೆ ವಾಸ್ತವದಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ಪೆಟ್ರೋಲ್ ಕೊರತೆಯು ದಿನನಿತ್ಯದ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಕಳೆದ ಒಂದು ತಿಂಗಳಿನಿಂದ ಪಂಪ್ಗಳಿಗೆ ಯಾವುದೇ ಸರಬರಾಜು ಇಲ್ಲ. ಇದರಿಂದ ಪರಿಸ್ಥಿತಿ ಕೆಟ್ಟದಾಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಮತ್ತೊಂದೆಡೆ, ಪಾಕಿಸ್ತಾನ ಪೆಟ್ರೋಲಿಯಂ ಡೀಲರ್ ಅಸೋಸಿಯೇಷನ್ , ತೈಲ ಕಂಪನಿಗಳು ಬೇಡಿಕೆಗೆ ಅನುಗುಣವಾಗಿ ಸಾಕಷ್ಟು ಸರಬರಾಜು ಮಾಡದ ಕಾರಣ ಪೆಟ್ರೋಲ್ ಪಂಪ್ಗಳ ಮುಂದೆ ವಾಹನ ಸವಾರರು ಸಾಲು ನಿಂತಿದ್ದಾರೆ. ಗುಜ್ರಾನ್ವಾಲಾ, ಫೈಸಲಾಬಾದ್, ಶೇಖುಪ್ರಾ, ಸರ್ಗೋಧಾ, ಸಾಹಿವಾಲ್, ಕಸೂರ್ ಜಿಲ್ಲೆಗಳಲ್ಲಿ ಪೆಟ್ರೋಲ್ ಪಂಪ್ಗಳನ್ನು ಮುಚ್ಚಲಾಗಿದೆ ಎಂದು ವರದಿ ತಿಳಿಸಿದೆ.