ದಕ್ಷಿಣ ಕೊರಿಯಾ: ದಕ್ಷಿಣ ಕೊರಿಯಾದ ಗಾಯಕಿ ಪಾರ್ಕ್ ಬೋ ರಾಮ್ ತಮ್ಮ 30ನೇ ವಯಸ್ಸಿಗೆ ವಿಧಿವಶರಾಗಿದ್ದಾರೆ. ಏ.11ರಂದು ಗಾಯಕಿ ನಿಧನರಾಗಿದ್ದಾರೆ. ಏಜೆನ್ಸಿ ಕ್ಸಾನಾಡು ಎಂಟರ್ಟೈನ್ಮೆಂಟ್ ಕಡೆಯಿಂದ ಗಾಯಕಿಯ ಸಾವಿನ ಕುರಿತು ಅಧಿಕೃತ ಮಾಹಿತಿ ಸಿಕ್ಕಿದೆ.
ಅವರ ಹಠಾತ್ ನಿಧನದ ಬಗ್ಗೆ ಅವರ ಕುಟುಂಬದಕ್ಕೆ ಮತ್ತು ಆಪ್ತರಿಗೆ ಶಾಕ್ ಕೊಟ್ಟಿದೆ. ಗಾಯಕಿಯ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ. ಪೊಲೀಸರು ಈ ಬಗ್ಗೆ ವಿಚಾರಣೆ ಕೈಗೊಂಡಿದ್ದಾರೆ.