News Karnataka Kannada
Friday, May 17 2024
ವಿದೇಶ

ಉಕ್ರೇನ್ ಮೇಲೆ ರಷ್ಯಾದಿಂದ ಮತ್ತೆ ಕ್ಷಿಪಣಿ ದಾಳಿ; ಎಂಟು ಬಲಿ

Ukrn
Photo Credit : NewsKarnataka

ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ನ ಮೇಲೆ ಶನಿವಾರ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿ ಕನಿಷ್ಠ 10 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಪ್ರಾದೇಶಿಕ ಅಧಿಕಾರಿಗಳನ್ನು ಉಲ್ಲೇಖಿಸಿ ಅಲ್ ಜಜೀರಾ ವರದಿ ಮಾಡಿದ್ದು, ರಷ್ಯಾದ ಪಡೆಗಳು ಬಾಂಬ್‌ ಮತ್ತು ಕ್ಷಿಪಣಿಗಳನ್ನು ಬಳಸಿ ಉಕ್ರೇನ್ ಮೇಲೆ ದಾಳಿ ಮಾಡಿದವು ಎಂದು ಪ್ರಾದೇಶಿಕ ಅಧಿಕಾರಿಗಳು ಹೇಳಿದರೆ, ಉಕ್ರೇನ್‌ನ ರಾಷ್ಟ್ರೀಯ ಪೊಲೀಸರು ದಾಳಿಯನ್ನು ಡ್ರೋನ್‌ಗಳಿಂದ ನಡೆಸಲಾಗಿದೆ ಎಂದು ಹೇಳಿದ್ದಾರೆ.

ನಗರದ ಬೀದಿಗಳಲ್ಲಿ ಮತ್ತು ಕಟ್ಟಡಗಳ ಸಮೀಪದಲ್ಲಿ ನಡೆದ ದಾಳಿಯ ಚಿತ್ರಗಳನ್ನು ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.

ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ನ ಮೇಲೆ ರಷ್ಯಾ ಮಾಡಿದ ದಾಳಿಯ ಬಗ್ಗೆ ಖಾರ್ಕಿವ್ ಪ್ರದೇಶದ ಗವರ್ನರ್ ಓಲೆಹ್ ಸಿನಿಹುಬೊವ್ ಅವರು ಪ್ರತಿಕ್ರಿಯೆ ನೀಡಿದ್ದು, ಖಾರ್ಕಿವ್ ನಗರದ ಮೇಲೆ ರಾತ್ರಿಯಿಡೀ ಕ್ಷಿಪಣಿ ದಾಳಿಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಆದರೆ ನಂತರ ಸಾವಿನ ಸಂಖ್ಯೆ ಎಂಟಕ್ಕೆ ಏರಿದೆ. ಏತನ್ಮಧ್ಯೆ, ಖಾರ್ಕಿವ್‌ನ ಮೇಯರ್ ಇಗೊರ್ ತೆರೆಖೋವ್ ಆ ಅಂಕಿಅಂಶವನ್ನು ಪರಿಶೀಲಿಸಿ ಇನ್ನೂ ಹತ್ತು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು