News Karnataka Kannada
Thursday, May 02 2024
ವಿದೇಶ

ಗಾಜಾದಲ್ಲಿ ಹೋರಾಡುತ್ತಿದ್ದ ಭಾರತೀಯ ಮೂಲದ ಇಸ್ರೇಲಿ ಯೋಧ ಮೃತ್ಯು

Indian-origin Israeli soldier dies while fighting in Gaza
Photo Credit : News Kannada

ಟೆಲ್‌ ಅವೀವ್: ಗಾಜಾದಲ್ಲಿ ಹೋರಾಡುತ್ತಿದ್ದ ಭಾರತೀಯ ಮೂಲದ ಇಸ್ರೇಲಿ ಯೋಧ ಮೃತಪಟ್ಟಿದ್ದಾರೆ ಎಂದು ಪಟ್ಟಣದ ಮೇಯರ್ ಇಂದು(ನ.01) ತಿಳಿಸಿದ್ದಾರೆ. ದಕ್ಷಿಣ ಇಸ್ರೇಲಿ ಪಟ್ಟಣ ಡಿಮೋನಾದ ಹಾಲೆಲ್ ಸೊಲೊಮನ್ (20) ಮೃತಪಟ್ಟ ಯೋಧ.

ಗಾಜಾದಲ್ಲಿ (Gaza) ನಡೆದ ಯುದ್ಧದಲ್ಲಿ ಡಿಮೋನಾ ಅವರ ಮಗ ಹಾಲೆಲ್ ಸೊಲೊಮನ್ ಅವರು ಮಡಿದ ಸುದ್ದಿಯನ್ನು ನಾವು ಬಹಳ ದುಃಖದಿಂದ ಘೋಷಿಸುತ್ತೇವೆ ಎಂದು ಡಿಮೋನಾದ ಮೇಯರ್ ಬೆನ್ನಿ ಬಿಟ್ಟನ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಯೋಧನ ಪೋಷಕರ ದುಃಖದಲ್ಲಿ ನಾವು ಕೂಡ ಭಾಗಿದಾರರು. ಹಾಲೆಲ್ ಅವರು ಅರ್ಥಪೂರ್ಣ ಸೇವೆ ಮಾಡಲು ಹಾತೊರೆಯುತ್ತಿದ್ದರು. ಉತ್ತಮ ಗುಣದ ವ್ಯಕ್ತಿತ್ವದವರಾಗಿದ್ದರು. ಇಡೀ ಡಿಮೋನಾ ನಗರವು ಅವರ ಅಗಲಿಕೆಯಿಂದ ದುಃಖಿತವಾಗಿದೆ ಎಂದು ವಿಷಾದಿಸಿದ್ದಾರೆ.

ಗಾಜಾದಲ್ಲಿ ನಡೆದ ಯುದ್ಧದಲ್ಲಿ ಕನಿಷ್ಠ 11 ಇಸ್ರೇಲಿ ಸೈನಿಕರು ಹತ್ಯೆಯಾಗಿದ್ದಾರೆ. ಬಲಿದಾನಗೈದ ಯೋಧರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಮರಿಸಿದ್ದಾರೆ. ಆದರೆ ಗೆಲುವು ಸಿಗುವ ವರೆಗೆ ಹೋರಾಟ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು