News Karnataka Kannada
Friday, May 17 2024
ಮಂಗಳೂರು

ನ.03 ರಂದು ಮಂಗಳೂರಿನಲ್ಲಿ ಶುಭಾರಂಭಗೊಳ್ಳಲಿದೆ ಹರ್ಷದ 3ನೇ ಮಳಿಗೆ

Photo Credit : News Kannada

ಮಂಗಳೂರು: ಕರ್ನಾಟಕದ ಪ್ರಸಿದ್ಧ ಗೃಹೋಪಕರಣಗಳ ಮಳಿಗೆ ʼಹರ್ಷ’ದ ಒಡೆತನ ಹೊಂದಿರುವ ಪ್ರಕಾಶ್ ರಿಟೇಲ್ ಪ್ರೈವೇಟ್ ಲಿಮಿಟೆಡ್, ಉಡುಪಿಯ ಅಂಬಲಪಾಡಿಯಲ್ಲಿ ಕೇಂದ್ರ ಕಛೇರಿ ಹೊಂದಿದ್ದು, ಮೊತ್ತ ಮೊದಲ `ಹರ್ಷ’ ಮಳಿಗೆಯನ್ನು ಉಡುಪಿಯ ಕೆ.ಎಂ. ಮಾರ್ಗದಲ್ಲಿ 9 ಮಾರ್ಚ್, 1987ರಲ್ಲಿ ಆರಂಭಿಸಿತ್ತು. ಗ್ರಾಹಕರ ಅಭೂತಪೂರ್ವ ಬೆಂಬಲದ ಫಲವಾಗಿ ಉಡುಪಿಯಲ್ಲಿ ಪಡೆದ ಯಶಸ್ಸಿನ ನಂತರದ ವರ್ಷಗಳಲ್ಲಿ `ಹರ್ಷ’ ಮಳಿಗೆಗಳನ್ನು ಕರಾವಳಿ ಕರ್ನಾಟಕದ ಮಂಗಳೂರು, ಪುತ್ತೂರು, ಕುಂದಾಪುರ, ಬ್ರಹ್ಮಾವರ, ಸುರತ್ಕಲ್ ಮಾತ್ರವಲ್ಲದೆ ಮಲೆನಾಡಿನ ಶಿವಮೊಗ್ಗ, ಮತ್ತು ಉತ್ತರ ಕರ್ನಾಟಕದ ಪ್ರತಿಷ್ಠಿತ ನಗರಗಳಾದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮತ್ತು ಗುಲ್ಬರ್ಗ ಮಹಾನಗರಗಳಲ್ಲೂ ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ `ಹರ್ಷ’ ಮಳಿಗೆಗಳನ್ನು ವಿಸ್ತರಿಸುವ ಮೂಲಕ 16 ಮಳಿಗೆಗಳಲ್ಲಿ ಒಟ್ಟು 3.5 ಲಕ್ಷ ಚದರದಡಿ ಬೃಹತ್ ರಿಟೇಲ್ ಸ್ಥಳಾವಕಾಶ ಹೊಂದಿದೆ.

ನವಪೀಳಿಗೆಯ ಆಕಾಂಕ್ಷೆಗಳನ್ನು ಪೂರೈಸುವ 3ನೇ ಮಳಿಗೆ:
ರಾಜ್ಯಾದ್ಯಂತ ಸಾವಿರಾರು ಗ್ರಾಹಕರು `ಹರ್ಷ`ದ ವೈಶಿಷ್ಠ್ಯವನ್ನು ಅನುಭವಿಸಿ ಮೆಚ್ಚಿದ್ದಾರೆ. ಮಂಗಳೂರಿನಲ್ಲಿ
2 ಮಳಿಗೆಗಳನ್ನು ಹೊಂದಿರುವ ಹರ್ಷ, ಇದೇ ಮೊದಲ ಬಾರಿಗೆ ನಗರದ ಮಾಲ್‍ನಲ್ಲಿ 3ನೇ ಮಳಿಗೆಯು, ನಿಮ್ಮ ಆಧುನಿಕ ಶಾಪಿಂಗ್‍ನ ಸುಂದರ ತಾಣವಾಗಿ ಮೂಡಿಬರಲಿದೆ. ನವಪೀಳಿಗೆಯ ಆಕಾಂಕ್ಷೆಗನುಗುಣವಾಗಿ ಉತ್ಕೃಷ್ಟ ಗೃಹೋಪಕರಣಗಳ ಜೊತೆಗೆ ಅಡುಗೆಯ ಸಾಧನಗಳು, ಹೊಚ್ಚ-ಹೊಸ ಡಿಜಿಟಲ್ ತಂತ್ರಜ್ಞಾನದ ವಸ್ತು-ವೈವಿಧ್ಯಗಳೊಂದಿಗೆ ಕಂಗೊಳಿಸುತ್ತಿರುವ `ಹರ್ಷ’, ಮಂಗಳೂರಿನ ಫಿಜ್ಹಾ ಬೈ ನೆಕ್ಸಸ್ ಮಾಲ್‍ನ ಸೆಕೆಂಡ್ ಫ್ಲೋರ್‍ನಲ್ಲಿ,  ನವೆಂಬರ್ 03ರ ರಂದು ಬೆಳಿಗ್ಗೆ 11.00ಕ್ಕೆ ಶುಭಾರಂಭಗೊಳ್ಳಲಿದ್ದು, ನಿಮ್ಮೆಲ್ಲರಿಗೂ ಶಾಪಿಂಗ್‍ನ ವಿನೂತನ ಅನುಭವ ನೀಡಲಿದೆ.

ಗ್ರಾಹಕರಿಗೆ ಇಲ್ಲಿ ದೊರಕುವ ಸುಲಲಿತ ಶಾಪಿಂಗ್ ಸೌಲಭ್ಯ, ನಗುಮೊಗದ ಸ್ವಾಗತ, ಉತ್ತಮ ಗುಣಮಟ್ಟದ ಉತ್ಪನ್ನಗಳು ಮಾರಾಟ ನಂತರದ ತೃಪ್ತಿಕರ ಸೇವೆ. ಇವೆಲ್ಲದಕ್ಕೆ ಕಾರಣ `ಹರ್ಷ’ದ ಸಾಮಾಜಿಕ ಬದ್ಧತೆಯ ಧ್ಯೇಯ. ಹರ್ಷದ ಎಲ್ಲಾ ಮಳಿಗೆಗಳಲ್ಲಿ ವರ್ಷಂಪ್ರತಿ ನಡೆಯುವ ವಿಶೇಷ ಮಾರಾಟೋತ್ಸವಗಳಾದ ಹರ್ಷೋತ್ಸವ, ಮಾನ್ಸೂನ್ ಮ್ಯಾಜಿಕ್, ಹ್ಯಾಪಿ ಟೈಮ್ಸ್, ದೀಪಾವಳೀ ಬಜಾರ್ ಸಂದರ್ಭದಲ್ಲಿ ಅತ್ಯಾಧುನಿಕ ಗೃಹೋಪಯೋಗಿ ಉಪಕರಣಗಳ ಪ್ರದರ್ಶನ ಹಾಗೂ ಮಾರಾಟ ಜೊತೆಗೆ ಆಕಷರ್ಷಕ ಕೊಡುಗೆಗಳು ಮತ್ತು ವಿಶೇಷ ರಿಯಾಯಿತಿ ನೀಡುತ್ತಿರುವುದು ಗ್ರಾಹಕ ವರ್ಗದಲ್ಲಿ ರೋಮಾಂಚನವನ್ನೇ ಉಂಟುಮಾಡುತ್ತಿದೆ.

ಮಂಗಳೂರಿನ 3 ಹಾಗೂ ಮಾಲ್‍ನ ಮೊದಲ ಮಳಿಗೆ:
ಸುವಿಶಾಲವಾಗಿ ಮೈದುಂಬಿರುವ `ಹರ್ಷ’ದ ನೂತನ ಮಳಿಗೆಯು ಅಂತಾರಾಷ್ಠ್ರೀಯ ಮಟ್ಟದ ಡಿಸ್ಪ್ಲೇಯೊಂದಿಗೆ ಗ್ರಾಹಕರಿಗೆ ಶಾಪಿಂಗ್‍ನ ವಿಶೇಷ ಅನುಭವವನ್ನೇ ನೀಡಲಿದೆ. 20,000 ಚದರದಡಿ ಸ್ಥಳಾವಕಾಶವಿರುವ ಸಂಪೂರ್ಣ ಹವಾನಿಯಂತ್ರಿತ `ಹರ್ಷ’ದಲ್ಲಿ ವೈವಿಧ್ಯಮಯ ಉತ್ಪನ್ನಗಳ ವಿಶಾಲ ಶ್ರೇಣಿಯನ್ನೇ ನೋಡಬಹುದಾಗಿದೆ. ಆಡಿಯೋ ಸಿಸ್ಟಮ್, ಹೋಮ್ ಥಿಯೇಟರ್, ಸ್ಮಾರ್ಟ್ ಫೋನ್, ಕಂಪ್ಯೂಟರ್, ಲ್ಯಾಪ್‍ಟಾಪ್, ಪ್ರಿಂಟರ್ಸ್, ಎಲ್‍ಇಡಿ ಟಿವಿ, ಏರ್ ಕಂಡೀಷನರ್, ರೆಫ್ರಿಜರೇಟರ್, ವಾಶಿಂಗ್ ಮಶಿನ್, ಮೈಕ್ರೋವೇವ್ ಅವನ್, ಡಿಶ್‍ವಾಶರ್, ಡೀಪ್ ಫ್ರೀಜರ್, ಸ್ಮಾರ್ಟ್ ವಾಚ್ ಹಾಗೂ ಇವುಳಿಗೆ ಸಂಬಂಧಿಸಿದ ಆ್ಯಕ್ಸಸರೀಸ್ ಸೇರಿದಂತೆ ಎಲ್ಲಾ ತರಹದ ಡಿಜಿಟಲ್ ಹಾಗೂ ಇಲೆಕ್ಟ್ರಾನಿಕ್ ಗೃಹೋಪಕರಣಗಳು. ಕುಕ್ಕಿಂಗ್ ಸೆಟ್, ಪ್ರೆಶರ್ ಕುಕ್ಕರ್, ಮಿಕ್ಸಿ, ಗ್ರೈಂಡರ್, ಗ್ಯಾಸ್ ಸ್ಟವ್, ಹಾಬ್, ಚಿಮ್ನಿ, ಫ್ಯಾನ್, ಕೂಲರ್, ಐರನ್ ಬಾಕ್ಸ್, ಕೆಟಲ್, ವಾಟರ್ ಪ್ಯೂರಿಫೈಯರ್, ವ್ಯಾಕ್ಯೂಮ್ ಕ್ಲೀನರ್ ಸೇರಿದಂತೆ ಎಲ್ಲಾ ಅಡುಗೆಯ ಸಾಧನಗಳು ಹಾಗೂ ಇಲೆಕ್ಟ್ರಾನಿಕ್ ಉಪಕರಣಗಳು. ಹೀಗೆ ತಮ್ಮ ಆಯ್ಕೆಯ ವಿಶ್ವವಿಖ್ಯಾತ ಬ್ರಾಂಡ್‍ನ ಗೃಹೋಪಯೋಗಿ ಉಪಕರಣಗಳನ್ನು ಒಂದೇ ಸೂರಿನಡಿ ಖರೀದಿಸುವ ಸೌಲಭ್ಯ ಇಲ್ಲಿನ ಗ್ರಾಹಕರಿಗೆ ಹರ್ಷೋಲ್ಲಾಸದೊಂದಿಗೆ ದೊರೆಯಲಿದೆ.

ಮಂಗಳೂರಿನ ಮೂರನೇ ಮಳಿಗೆ  ನವೆಂಬರ್ 03ರ ರಂದು ಬೆಳಿಗ್ಗೆ 11.00ಕ್ಕೆ ಫಿಜ್ಹಾ ಬೈ  ನೆಕ್ಸಸ್ ಮಾಲ್‍ನ ಸೆಕೆಂಡ್ ಫ್ಲೋರ್‍ನಲ್ಲಿ, ಶುಭಾರಂಭಗೊಳ್ಳಲಿದೆ. ಮಳಿಗೆಯನ್ನು ಯು.ಟಿ. ಖಾದರ್, ಸಭಾಧ್ಯಕ್ಷರು ಕರ್ನಾಟಕ ವಿಧಾನ ಸಭೆ ಇವರು ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವೇದವ್ಯಾಸ ಕಾಮತ್, ಶಾಸಕರು ಇವರು ವಹಿಸಿಕೊಳ್ಳುವರು. ಹಾಗೆಯೇ ಮುಖ್ಯ ಅಭ್ಯಾಗತರಾಗಿ ಶ್ರೀ ವಿನಯ್ ಕುಮಾರ್ ಸೊರಕೆ ಮಾಜಿ ಸಚಿವರು, ಶ್ರೀ ಜೆ. ಆರ್. ಲೋಬೋ ಮಾಜಿ ಶಾಸಕರು, ಶ್ರೀ ಸುಧೀರ್ ಶೆಟ್ಟಿ ಕಣ್ಣೂರು, ಮಹಾಪೌರರು ಮಂಗಳೂರು ನಗರಪಾಲಿಕೆ ಪಾಲ್ಗೊಳ್ಳಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು