News Karnataka Kannada
Friday, May 03 2024
ವಿದೇಶ

ನಿಕ್ಕಿಹ್ಯಾಲೆಗೆ ನಿಮ್ಮ ದೇಶಕ್ಕೆ ಹಿಂದುರಿಗಿ ಎಂದ ಅಮೆರಿಕ ಲೇಖಕಿ

In a racist tirade, Nikki Haley asked to go back to 'her own country'
Photo Credit : IANS

ನ್ಯೂಯಾರ್ಕ್‌: ಮುಂಬರುವ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಪಟ್ಟಿಯಲ್ಲಿರುವ ಭಾರತೀಯ-ಅಮೆರಿಕನ್ ನಿಕ್ಕಿ ಹ್ಯಾಲೆ ಅವರನ್ನು ನಿಷ್ಪ್ರಯೋಜಕ ಮತ್ತು ಅಪ್ರಬುದ್ಧ ಜೀವಿ ಎಂದು ಸಂಪ್ರದಾಯವಾದಿ ಲೇಖಕಿ ಆನ್ ಕೌಟ್ಲರ್ ಟೀಕೆ ಮಾಡಿದ್ದಾರೆ.

“ನೀವು ನಿಮ್ಮ ಸ್ವಂತ ದೇಶಕ್ಕೆ ಏಕೆ ಹಿಂತಿರುಗಬಾರದು?” ಎಂದು ಕೌಲ್ಟರ್ ಹ್ಯಾಲೆ ಅವರನ್ನು ಪ್ರಶ್ನಿಸಿದ್ದಾರೆ. ಈ ವಾರ ‘ದಿ ಮಾರ್ಕ್ ಸಿಮೋನ್ ಶೋ’ ಪಾಡ್‌ಕಾಸ್ಟ್‌ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ಹ್ಯಾಲೆ ಫೆಬ್ರವರಿ 14 ರಂದು ತನ್ನ ಅಧ್ಯಕ್ಷೀಯ ಬಿಡ್ ಅನ್ನು ವೀಡಿಯೊ ಸಂದೇಶದಲ್ಲಿ ಘೋಷಿಸಿದ್ದರು. ಅಲ್ಲದೆ ಭಾರತೀಯ ಪರಂಪರೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದರು.ʼ

ಅವರ (ಹ್ಯಾಲೆ) ಉಮೇದುವಾರಿಕೆ ನಾನು ಭಾರತಕ್ಕೆ ವಲಸೆ ಹೋಗಬೇಕಾದ ಪರಿಸ್ಥಿತಿಯನ್ನು ನೆನಪಿಸುತ್ತದೆ ಎಂದು ಕೌಟ್ಲರ್ ಹೇಳಿದ್ದಾರೆ. ಅಲ್ಲದೆ ಭಾರತದಲ್ಲಿ ಹಸುಗಳ ಪೂಜೆ ಬಗ್ಗೆಯೂ ಟೀಕೆ ಮಾಡಿದ್ದು, ಭಾರತದಲ್ಲಿ ಇಲಿಗಳನ್ನು ಪೂಜಿಸುವ ದೇವಾಲಯವಿದೆ ಎಂದು ಭಾರತದ ಸಂಪ್ರದಾಯಗಳ ಬಗ್ಗೆ ನಿಂದಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
39339
ಉಮೇ‌ಶ ಎಚ್‌.ಎಸ್‌.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು