ಬಾಂಗ್ಲಾ ದೇಶ: ಹಿಂದೂವೊಬ್ಬ ಇಸ್ಲಾಂ ವಿರುದ್ಧವಾಗಿರುವ ಫೇಸ್ಬುಕ್ ಪೋಸ್ಟ್ ಮಾಡಿದ್ದಾನೆ ಎಂದು ಅಲ್ಲಿನ ಇಸ್ಲಾಮಿಸ್ಟ್ ಗಳು ಆತನ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೇ ಆತನ ಮನೆಗೆ ಹಾಗೂ ದೇವಸ್ಥಾನಕ್ಕೆ ಬೆಂಕಿ ಹಚ್ಚಲಾಗಿದೆ. ಹಾಗೂ ದಾಳಿಕೋರರು ಕಲ್ಲುತೂರಾಟವನ್ನೂ ನಡೆಸಿದ್ದಾರೆ. ಬಾಂಗ್ಲಾದೇಶದ ನರೈನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
“ಪ್ರತಿಭಟನಾಕಾರರನ್ನು ಚದುರಿಸಲು ಪೋಲೀಸರು ಲಾಠೀಚಾರ್ಜ್ ಮಾಡಿದ್ದಾರೆ, ಆದರೆ ಇಸ್ಲಾಮಿಸ್ಟ್ಗಳು ಬಗ್ಗದೇ ಇದ್ದಾಗ ಅವರನ್ನು ಭಯಪಡಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ” ಎಂದು ಸ್ಥಳೀಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹರನ್ ಚಂದ್ರ ಪಾಲ್ ಹೇಳಿದ್ದಾರೆ. ಯುವಕನೊಬ್ಬ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಇಸ್ಲಾಂ ವಿರುದ್ಧ ಪೋಸ್ಟ್ ಒಂದನ್ನು ಮಾಡಿದ್ದಾನೆ ಇದರಿಂದ ಕುಪಿತಗೊಂಡ ಮುಸ್ಲಿಮರು ಆತನ ಮನೆಗೆ ಬೆಂಕಿ ಹಚ್ಚಿದ್ದಾರೆ.
ಈ ಸಂಬಂಧ ಯುವಕ ಆಕಾಶ್ ಸಹಾ ಮತ್ತು ತಂದೆ ಅಶೋಕ್ ಸಹಾ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.