News Karnataka Kannada
Wednesday, May 08 2024
ಚಿಕಮಗಳೂರು

ಚಿಕ್ಕಮಗಳೂರು: ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಐದು ಲಕ್ಷದವರೆಗೂ ಸಾಲ – ಸಿ.ಟಿ.ರವಿ ಸ್ವಾಗತ

Chikkamagaluru: Farmers to get loans up to Rs 5 lakh at zero interest rate, welcomes C T Ravi
Photo Credit : News Kannada

ಚಿಕ್ಕಮಗಳೂರು: ರಾಜ್ಯದಲ್ಲಿ ಸಹಕಾರಿ ಕ್ಷೇತ್ರದ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವುದರ ಜತೆಗೆ, ಕಮರ್ಷಿಯಲ್ ಬ್ಯಾಂಕ್‌ಗಳಲ್ಲಿ ಸಾಲ ಪಡೆದವರ ಆಸ್ತಿ ಜಪ್ತಿ ಮತ್ತು ಹರಾಜಿನ ನಿರ್ಣಯ ಕ್ರಮವನ್ನು ಮಾಡಬಾರದೆಂದು ಸರ್ಕಾರ ನಿರ್ಣಯ ಮಾಡಿ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ರವರು ಘೋಷಣೆ ಮಾಡ್ಡಿದ್ದಾರೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ.

ಅವರು ಲಕ್ಯಾ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ೯೦ ಲಕ್ಷ ರೂ ವೆಚ್ಚದಲ್ಲಿ ನೂತನ ಕಟ್ಟಡವನ್ನು ಕಟ್ಟಲಾಗಿದೆ, ಕಳಸಾಪುರದಲ್ಲಿ ಡಿಸಿಸಿ ಬ್ಯಾಂಕ್ ಬ್ರ್ಯಾಂಚ್ ತೆರೆಯಲಾಗುವುದು, ಇಡೀ ರಾಜ್ಯದಲ್ಲಿ ಸಹಕಾರಿ ಕ್ಷೇತ್ರದ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವುದರ ಜತೆಗೆ, ಕಮರ್ಷಿಯಲ್ ಬ್ಯಾಂಕ್‌ಗಳಲ್ಲಿ ಸಾಲ ಪಡೆದವರ ಆಸ್ತಿ ಜಪ್ತಿ ಮತ್ತು ಹರಾಜಿನ ನಿರ್ಣಯ ಕ್ರಮವನ್ನು ಮಾಡಬಾರದೆಂದು ಸರ್ಕಾರ ಸೂಚನೆ ನೀಡಿದೆ.

ರೈತರು ಉದ್ದೇಶ ಪೂರ್ವಕವಾಗಿ ಮೊಸ ಮಾಡುವವರಲ್ಲ, ಬೆಳೆ ನಾಶದಿಂದ, ಮಳೆ ಬಾರದಿದ್ದಾಗ ರೈತ ಅಸಾಯಕನಾಗುತ್ತಾನೆ, ರಸಗೋಬ್ಬರ ಸಮಸ್ಯೆ ನಿವಾರಣೆಗಾಗಿ ಕೇಂದ್ರ ಸರ್ಕಾರ ಸಬ್ಸಿಡಿಯನ್ನು ನೀಡುತ್ತಿದೆ, ರೈತರಿಗೆ ಮೊಸವಾಗಬಾರದೆಂಬ ಉದ್ದೇಶದಿಂದ ಭಾರತ್ ಯೂರಿಯಾ ಎಂಬ ಒಂದೇ ಬ್ರಾಂಡಿನ ರಸಗೋಬ್ಬರವನ್ನು ದೇಶದಾದ್ಯಂತ ಮಾರಾಟ ಮಾಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ, ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ೧೦ ಸಾವಿರ ರೂಗಳನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ, ಫಸಲ್‌ವಿಮಾ ಯೋಜನೆಯಡಿ ಬೆಳೆ ಪರಿಹಾರ ನೀಡಿದೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸ್ಸಾದ ಮನೆ-ಮನೆಗಳಿಗೆ ಗಂಗೆ ಎಂಬ ಜಲಜೀವನ್ ಯೋಜನೆಯಲ್ಲಿ ೫.೫ ಕೋಟಿ ಹಣ ಬಿಡುಗಡೆ ಮಾಡಿ ಪ್ರತಿ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ನೀಡಲಾಗುವುದು, ೪೫ ಲಕ್ಷ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿ ನೆಡೆಯುತ್ತಿದೆ, ಈ ಪಂಚಾಯಿತಿಗೆ ೫೫ ಕೋಟಿ ರೂ ಅನುದಾನ ನೀಡಿ ಶಾಶ್ವತ ಕುಡಿಯುವ ನೀರಿನ ಯೋಜನೆ ಮಾಡಲಾಗಿದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಸವರಾಜಪ್ಪ ಮಾತನಾಡಿ ರೈತರ ಬಳಿಗೆ ತೆರಳಿ ಸಹಕಾರಿ ಸಂಘದಿಂದ ಆಗುವ ಪ್ರಯೋಜನಗಳನ್ನು ತಿಳಿಸಿ, ರೈತರಿಂದ ಶೇರನ್ನು ಸಂಗ್ರಹಿಸಿ ಸಂಘದ ವತಿಯಿಂದ ಸಾಲವನ್ನು ವಿತರಣೆ ಮಾಡಿಕೊಂಡು ಬಂದಿದ್ದು, ೨ ವರ್ಷಗಳಿಂದ ಕೃಷಿ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಿದ ಪ್ರತಿಯೋಬ್ಬ ರೈತರಿಗೆ ಬೇದಬಾವ ತೊರದೆ ಪ್ರತಿರೈತರಿಗು ಇಂದು ೧೦ ಕೋಟಿ ವರೆಗಿನ ಸಾಲವನ್ನು ನೀಡಲಾಗಿದೆ, ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮುಗುಳುವಳ್ಳಿ ನಿರಂಜನ್ ಮಾತನಾಡಿ ಜಿಲ್ಲೆಯಲ್ಲಿ ೨೮೦ ಕೋಟಿ ಸಾಲಮನ್ನಾದ ಜತೆಗೆ ೫ ಲಕ್ಷ ರೂಗಳ ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೋರೆಯುವಂತೆ ಸಹಕಾರ ಇಲಾಖೆ, ಜಿಲ್ಲಾ ಸಹಕಾರಿ ಬ್ಯಾಂಕ್ ಮಾಡುತ್ತಿದೆ, ರಾಜ್ಯದಲ್ಲಿ ಇರುವ ಎಲ್ಲಾ ಸಹಕಾರ ಬ್ಯಾಂಕ್ ಆರ್ಥಿಕ ಒತ್ತಡವನ್ನು ಅನುಭವಿಸುತ್ತಿದೆ, ಈ ಸಮಸ್ಯೆಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಗೆಹರಿಸಬೇಕು ಮತ್ತು ನಬಾರ್ಡ್‌ನಿಂದ ಹೆಚ್ಚಿನ ಮರು ಹಣಕಾಸಿನ ವ್ಯವಸ್ಥೆಯ ಜತೆಗೆ, ರಾಜ್ಯ ಸರ್ಕಾರದಿಂದ ೪% ಮತ್ತು ಕೇಂದ್ರ ಸರ್ಕಾರದಿಂದ ೩% ಬಡ್ಡಿ ದರದಲ್ಲಿ ಸಿಗುತ್ತಿರು ಹಣದಲ್ಲಿ ರಾಜ್ಯ ಸರ್ಕಾರದಿಂದ ಬಡ್ಡಿ ನೆರವು ಸಹಾಯದ ದೋರೆತಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್‌ಗಳಿಗೆ ಲಾಭವಾಗುವುದರ ಜತೆಗೆ, ಸಹಕಾರ ಸಂಘದ ವತಿಯಿಂದ ಹೆಚ್ಚಿನ ರೈತರಿಗೆ ಸಾಲ ವಿತರಣೆ ಮಾಡಬಹುದು ಎಂದು ತಿಳಿಸಿದರು.

ಲಕ್ಯಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಡಿ.ಎಂ.ಕೃಷ್ಣೇಗೌಡ ಮಾತನಾಡಿ ರೈತರ ಸಹಕಾರದಿಂದ ಲಕ್ಯಾ ಗ್ರಾಮದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ, ರೈತರು ಯಶಸ್ವಿ ಯೋಜನೆಯಲ್ಲಿ ಸದಸ್ಯತ್ವವನ್ನು ನೊಂದಾಣಿ ಮಾಡಿಕೊಂಡು, ಈ ಯೋಜನೆಯಲ್ಲಿ ಸಿಗುವ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಹಕಾರ ಸಂಘದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬೆಳವಾಡಿ ರವೀಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾಜಗಧೀಶ್, ಜನತಾಬಜಾರ್ ಅಧ್ಯಕ್ಷ ಮಲ್ಲೇದೇವರಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಲ್.ಕೆ.ರುದ್ರೇಗೌಡ, ತಾಪಂ ಮಾಜಿ ಉಪಾಧ್ಯಕ್ಷ ಎಲ್.ಟಿ.ರಂಗಪ್ಪ, ಎಲ್.ವಿ.ಬಸವರಾಜ್, ಸಂಘದ ಉಪಾಧ್ಯಕ್ಷ ಎಲ್.ಎಲ್.ಜಯ್ಯಣ್ಣ, ಆಡಳಿತ ಮಂಡಳಿಯ ನಿರ್ದೇಶಕ ಗೋ ಪಾಲಸ್ವಾಮಿ, ಬಸವರಾಜ್, ಧನಂಜಯ ಮೂರ್ತಿ, ಸಿದ್ದೇಗೌಡ, ಉಮೇಶ್, ಜಗಧೀಶ್, ತೇಜು, ಸಾವಿತ್ರಮ್ಮ ಮಂಜುನಾಥ್, ಮಂಜುಳಾಪರಮೇಶ್ವರಪ್ಪ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ನಾಗೇಶ್, ರಾಜೇಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಣ್ಣೇಗೌಡ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು