ಓಸ್ಲೋ: ಹ್ಯಾನ್ಸ್ ಚಂಡಮಾರುತದಿಂದ ನಾರ್ವೆ ದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ರಾಜಧಾನಿ ಓಸ್ಲೋದಿಂದ ಈಶಾನ್ಯಕ್ಕೆ ಸುಮಾರು 150 ಕಿಮೀ ದೂರದಲ್ಲಿರುವ ಬ್ರಾಸ್ಕೆರೆಡ್ಫಾಸ್ನಲ್ಲಿರುವ ಅಣೆಕಟ್ಟು ಭಾಗಶಃ ಕುಸಿದಿದೆ.
ಅನಿರೀಕ್ಷಿತ ಪ್ರವಾಹದಿಂದ ಅಣೆಕಟ್ಟಿನ ಫ್ಲಡ್ಗೇಟ್ಗಳು ಸರಿಯಾಗಿ ಕಾರ್ಯನಿರ್ವಹಿಸದೇ ಈ ದುರ್ಘಟನೆ ನಡೆದಿದೆ. ಬ್ರಾಸ್ಕೆರೆಡ್ಫಾಸ್ನಿಂದ ಕೆಳಗಿರುವ ಮೂರು ವಿದ್ಯುತ್ ಕೇಂದ್ರಗಳು ಹಾನಿಗೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರದಿಂದ ಹ್ಯಾನ್ಸ್ ಚಂಡಮಾರುತವು ನಾರ್ವೆಯನ್ನು ಜರ್ಜರಿತಗೊಳಿಸಿದ್ದು, ಪರಿಣಾಮವಾಗಿ 4,000 ಕ್ಕೂ ಹೆಚ್ಚು ಆಸ್ತಿಗಳಿಗೆ ಹಾನಿಯಾಗಿದೆ.
ಪ್ರವಾಹ, ಚಂಡಮಾರುತದಿಂದಾಗಿ 900 ಮಿಲಿಯನ್ ಕ್ರೋನರ್ ($88 ಮಿಲಿಯನ್) ಹಾನಿ ಉಂಟಾಗಿದೆ ಎಂದು ವರದಿಗಳು ಹೇಳಿವೆ. ಚಂಡಮಾರುತ ಪೀಡಿತ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಸರ್ಕಾರ ಹೆಲಿಕಾಪ್ಟರ್ ಒದಗಿಸಿದೆ ಎಂದು ನಾರ್ವೆ ಸಚಿವ ಎಮಿಲಿ ಎಂಗರ್ ಮೆಹ್ಲ್ ತಿಳಿಸಿದ್ದಾರೆ.