ಡಮಾಸ್ಕಸ್: ಯುದ್ಧಪೀಡಿತ ದೇಶದ ಕೇಂದ್ರ ಮತ್ತು ಕರಾವಳಿ ಪ್ರದೇಶಗಳಲ್ಲಿ ಇಸ್ರೇಲ್ ಕ್ಷಿಪಣಿ ದಾಳಿಯಿಂದ ಸಿರಿಯಾದ ನಾಲ್ವರು ಯೋಧರು ಮೃತಪಟ್ಟಿದ್ದಾರೆ.
ಮೆಡಿಟರೇನಿಯನ್ ನಿಂದ ಉಡಾಯಿಸಲಾದ ಇಸ್ರೇಲಿ ಕ್ಷಿಪಣಿ ದಾಳಿಯಿಂದ ಇನ್ನೊಬ್ಬರು ಗಾಯಗೊಂಡಿದ್ದಾರೆ ಮತ್ತು ವಸ್ತುಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಇದು ಸಿರಿಯಾದಲ್ಲಿನ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲಿನ ಸರಣಿ ದಾಳಿಗಳ ಮುಂದುವರಿಕೆಯಾಗಿದೆ ಎಂದು ಅದು ಹೇಳಿದೆ.
ನವೆಂಬರ್ 13 ರಂದು, ಕೇಂದ್ರ ಪ್ರಾಂತ್ಯವಾದ ಹೋಮ್ಸ್ನಲ್ಲಿರುವ ಮಿಲಿಟರಿ ವಾಯುನೆಲೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಸಿರಿಯಾ ಸೈನಿಕರು ಹತರಾಗಿದ್ದರು.