News Karnataka Kannada
Monday, May 06 2024
ವಿದೇಶ

50 ಒತ್ತೆಯಾಳುಗಳನ್ನ ಅಮಾನುಷವಾಗಿ ಕೊಲೆ ಮಾಡಿದ ಹಮಾಸ್ ಭಯೋತ್ಪಾದಕರು

Hamas terrorists brutally kill 50 hostages
Photo Credit : IANS

ಜೆರುಸಲೇಮ್: ಇಸ್ರೇಲ್​ ಮತ್ತು ಹಮಾಸ್​ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ.ಈಗ ಹಮಾಸ್​ ಭಯೋತ್ಪಾದಕರ ಭೀಬತ್ಸ್ಯ ಕೃತ್ಯವೊಂದು ಮುನ್ನೆಲೆಗೆ ಬಂದಿದ್ದು, ಸುಮಾರು 50 ಇಸ್ರೇಲ್​ನ ಒತ್ತೆಯಾಳುಗಳನ್ನು ಅಮಾನುಷವಾಗಿ ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

“ನಿರಂತರವಾಗಿ ಗಾಜಾಸ್ಟ್ರಿಪ್​ ಮೇಲೆ ಇಸ್ರೇಲ್​ ಏರ್​ಸ್ಟ್ರೈಕ್​​ ಮಾಡುತ್ತಿರುವ ಕಾರಣ ನಾವು 50 ಒತ್ತೆಯಾಳು ಇಸ್ರೇಲಿಗರನ್ನು ಕೊಲೆ ಮಾಡಿದ್ದೇವೆ” ಎಂದು ಹಮಾಸ್ ಭಯೋತ್ಪಾದಕರು ಹೇಳಿದ್ದಾರೆ ಎನ್ನಲಾಗಿದೆ. ನಮ್ಮವರನ್ನು, ನಮ್ಮ ಯುದ್ಧ ಟ್ಯಾಂಕರ್, ಸ್ಫೋಟಕ ವಸ್ತುಗಳು ಸೇರಿದಂತೆ ಗಾಜಾದೆಲ್ಲೆಡೆ ಇಸ್ರೇಲ್​ ಬಾಂಬ್ ಹಾಕಿ ನಾಶ ಮಾಡಿದೆ. ಇದಕ್ಕೆ ಪ್ರತೀಕಾರವಾಗಿ ಈ ಇಸ್ರೇಲಿಗರನ್ನು ಬಲಿ ಪಡೆದಿದ್ದೇವೆ ಎಂದು ಭಯೋತ್ಪಾದಕರು ತಿಳಿಸಿರುವುದಾಗಿ ಹೇಳಲಾಗಿದೆ.

ಗಾಜಾದಲ್ಲಿ 7,028 ಜನ ಮೃತಪಟ್ಟಿದ್ದಾರೆ ಎಂದು ಹಮಾಸ್​ನ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಹಮಾಸ್ ಅ.7ರ ದಾಳಿ ನಂತರ 1,400 ಇಸ್ರೇಲಿಗರನ್ನು ಹತ್ಯೆ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು