ಇಸ್ರೇಲ್: ಇಸ್ರೇಲ್ ವಿರುದ್ಧ ಸಮರ ಸಾರಿರುವ ಉಗ್ರ ಸಂಘಟನೆ ಹಮಾಸ್ ಸೋಮವಾರ (ಅಕ್ಟೋಬರ್ 23) ಮತ್ತೆ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಿದೆ.
ಮಾನವೀಯ ನೆಲೆಯಲ್ಲಿ ವೃದ್ಧ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಫೆಲೆಸ್ತೀನ್ ಗುಂಪು ಹಮಾಸ್ ಹೇಳಿದೆ.
ಒತ್ತೆಯಾಳುಗಳಿಗೆ ಆರೋಗ್ಯ ಕಾರಣಗಳಿಂದಾಗಿ ಮಾನವೀಯ ನೆಲೆಯಲ್ಲಿ ಇಬ್ಬರನ್ನು ಬಿಡುಗಡೆ ಮಾಡಲಾಗಿದೆ ಎಂದು ಹಮಾಸ್ ಹೇಳಿಕೆ ತಿಳಿಸಿದೆ. ಬಿಡುಗಡೆಯಾದ ಒತ್ತೆಯಾಳುಗಳನ್ನು ನುರಿಟ್ ಕೂಪರ್ (79) ಮತ್ತು ಯೋಚೆವೆಡ್ ಲಿಫ್ಶಿಟ್ಜ್ (85) ಎಂದು ಸ್ಥಳೀಯ ಮಾಧ್ಯಮಗಳು ಗುರುತಿಸಿವೆ.
ಗಾಜಾ ಗಡಿಯ ಬಳಿಯ ನಿರ್ ಓಜ್ನ ಕಿಬ್ಬಟ್ಜ್ನಲ್ಲಿ ಮಹಿಳೆಯರು ಮತ್ತು ಅವರ ಗಂಡಂದಿರನ್ನು ತಮ್ಮ ಮನೆಗಳಿಂದ ಒತ್ತೆಯಾಳುಗಳಾಗಿ ತೆಗೆದುಕೊಳ್ಳಲಾಗಿದೆ. ಅವರ ಗಂಡಂದಿರನ್ನು ಬಿಡುಗಡೆ ಮಾಡಲಿಲ್ಲ. ಒತ್ತೆಯಾಳುಗಳ ಬಿಡುಗಡೆಯ ಬಗ್ಗೆ ಇಸ್ರೇಲ್ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಬಿಡುಗಡೆಯಾದ ಒತ್ತೆಯಾಳುಗಳು ಈಜಿಪ್ಟ್ ರಾಫಾ ಕ್ರಾಸಿಂಗ್ ತಲುಪಿದ್ದಾರೆ ಎಂದು ಈಜಿಪ್ಟ್ ಸುದ್ದಿ ಸಂಸ್ಥೆ ತಡರಾತ್ರಿ ವರದಿ ಮಾಡಿದೆ.