ಅಮೇರಿಕ: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಮುಂದುವರೆಯುತ್ತಲೇಯಿದೆ. ಈ ನಡುವೆ ಅಮೆರಿಕದ ವ್ಯಕ್ತಿಯೊಬ್ಬ ಮುಸ್ಲಿಂ ಬಾಲಕನನ್ನು 26 ಬಾರಿ ಇರಿದು ಕೊಂದಿರುವ ಅಘಾತಕಾರಿ ಘಟನೆಯೊಂದು ಅಮೇರಿಕದಲ್ಲಿ ನಡದಿದೆ. ಇನ್ನು ಬಾಲಕನಿಗೆ ಮಾತ್ರವಲ್ಲದೆ ಆತನ ತಾಯಿಯ ಮೇಲೆ ದಾಳಿ ನಡೆಸಿದ್ದು, ಆಕೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವುದಾಗಿ ತಿಳಿದು ಬಂದಿದೆ.
ಅಮೆರಿಕದ ವ್ಯಕ್ತಿ ಬಾಲಕ ನ ಮನೆಗೆ ನುಗ್ಗಿ ಮನ ಬಂದಂತೆ ಹಲ್ಲೆ ನಡೆಸಿದ್ದಾನೆ. ಬಾಲಕನ ಎದೆ ತಲೆ ಸೇರಿದಂತೆ ಹಲವೆಡೆ ಚಾಕುವಿನಿಂದ ಇರಿದಿದ್ದಾನೆ. ಬಾಲಕನ ಹೊಟ್ಟೆಯಿಂದ ವೈದ್ಯರು 7 ಇಂಚಿನ ಬ್ಲೇಡ್ ಹೊರ ತೆಗೆದಿದ್ದಾರೆ. ಇನ್ನು ಈ ಘಟನೆ ಕುರಿತು ಅಮೇರಿಕದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿದೆ.