ಲೆವಿಸ್ಟನ್: ಅಮೆರಿಕದ ಮೈನೆ ರಾಜ್ಯದ ಲೆವಿಸ್ಟನ್ ನಗರದಲ್ಲಿ ರೆಸ್ಟೊರೆಂಟ್ ಮತ್ತು ಬೌಲಿಂಗ್ ಅಲೈ ಕೇಂದ್ರದ ಮೇಲೆ ದಾಳಿ ನಡೆಸಿ 18 ಜನರನ್ನು ಹತ್ಯೆ ಮಾಡಿದ ಬಂದೂಕುಧಾರಿ ಸ್ವಯಂ ಪ್ರೇರಿತವಾಗಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆ ನಡೆದ ಬಳಿಕ ಆರೋಪಿ ರಾಬರ್ಟ್ ಕಾರ್ಡ್ ಪತ್ತೆಗಾಗಿ ಪೊಲೀಸರು ತೀವ್ರ ತಲಾಷ್ ನಡೆಸಿದ್ದರು. ರಾಬರ್ಟ್ ಸೇನಾ ಮೀಸಲು ಪಡೆಯಲ್ಲಿ ಬಂದೂಕು ತರಬೇತುದಾರ ಎಂದು ಪೊಲೀಸ್ ಬುಲೆಟಿನ್ನಲ್ಲಿ ಹೇಳಲಾಗಿತ್ತು. ಈತನನ್ನು ಮೈನೆ ರಾಜ್ಯದ ಸಾಕೊದಲ್ಲಿ ತರಬೇತಿಗಾಗಿ ನಿಯೋಜಿಸಲಾಗಿತ್ತು.