News Karnataka Kannada
Monday, May 13 2024
ವಿದೇಶ

ಸಿಕ್ಕ ಸಿಕ್ಕ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದೆವು ಎಂದ ಹಮಾಸ್‌ ಉಗ್ರ: ವಿಡಿಯೋ ನೋಡಿ

Hamas terrorist says he raped women he found
Photo Credit : Twitter

ಜೆರುಸಲೇಂ: ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ದಾಳಿ ನಡೆಸಿ ಇಸ್ರೇಲ್‌ ಪ್ರಜೆಗಳನ್ನು ಅಪಹರಿಸಿದ್ದಾರೆ. ಯುವತಿಯರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ. ಎಳೆಯ ಕಂದಮ್ಮಗಳ ಶಿರಚ್ಛೇದ ಮಾಡಿದ್ದಾರೆ ಎಂದು ಅಮೆರಿಕ, ಇಸ್ರೇಲ್‌ ಆರೋಪಿಸಿತ್ತು. ಇದೀಗ ಇಸ್ರೇಲ್‌ ಪಡೆಗಳು ಹಮಾಸ್‌ ಉಗ್ರನನ್ನು ಸೆರೆಹಿಡಿದಿದ್ದು, ಸ್ವತಃ ಈ ವಿಚಾರಗಳನ್ನು ಬಾಯಿಬಿಟ್ಟಿದ್ದಾನೆ.

ಕಳೆದ ಶನಿವಾರ ನಾವು ಇಸ್ರೇಲ್‌ ಮೇಲೆ ದಾಳಿ ನಡೆಸಿದಾಗ ಅಲ್ಲಿ ನಮಗೆ ಸಿಕ್ಕ ಸಿಕ್ಕ ಯುವತಿಯರ ಮೇಲೆ ಅತ್ಯಾಚಾರ ಮಾಡಿದೆವು. ಮಕ್ಕಳು, ಶಿಶುಗಳು, ವೃದ್ಧರು ಮತ್ತು ಮಹಿಳೆಯರು ಸೇರಿದಂತೆ ನಮ್ಮ ಕಣ್ಣಿಗೆ ಬಿದ್ದ ಎಲ್ಲರನ್ನೂ ನಾವು ಕೊಂದು ಹಾಕಿದೆವು. ಅವರ ತಲೆ ಕತ್ತರಿಸಿದೆವು ಎಂದು ಹೇಳಿದ್ದಾನೆ. ಇಸ್ರೇಲಿ ಪಡೆಗಳಿಗೆ ಸೆರೆಸಿಕ್ಕ ಓರ್ವ ಹಮಾಸ್‌ ಉಗ್ರ ವಿಚಾರಣೆ ವೇಳೆ ಈ ಭಯಾನಕ ಅಂಶಗಳನ್ನು ಬಹಿರಂಗಪಡಿಸಿದ್ದಾನೆ. ಆತನ ವಿಚಾರಣೆ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ಸೋರಿಕೆಯಾಗಿದೆ.

ತನ್ನ ಹೆಸರು ಮೊಹಮ್ಮದ್‌ ನಹೇದ್‌ ಅಹ್ಮದ್‌ ಎಲ್‌- ಅರ್ಷಾ. ತಾನು ಗಾಜಾಪಟ್ಟಿಯ ರಫಾಹ್‌ ನಿವಾಸಿ ಎಂದು ಹೇಳಿಕೊಂಡಿರುವ ಉಗ್ರ ಜನರ ತಲೆಗಳನ್ನು ಕತ್ತರಿಸಿ ನೆಲದ ಮೇಲೆ ಎಸೆದೆವು. ಎದುರಿಗೆ ಬಂದವರನ್ನು ಚೆಂಡಾಡಿದೆವು. ಸಿಕ್ಕ ಸಿಕ್ಕ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದೆವು ಎಂದೂ ಉಗ್ರ ಹೇಳಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು