News Karnataka Kannada
Sunday, May 05 2024
ವಿದೇಶ

ಚೀನಾದಲ್ಲಿ ಆರ್ಥಿಕ ಹಿಂಜರಿತ, ಆತಂಕ ಹುಟ್ಟಿಸಿದ ಅಂಕಿ ಅಂಶ

China's economic slowdown raises concerns among people
Photo Credit : News Kannada

ನವದೆಹಲಿ: ಯುವ ನಿರುದ್ಯೋಗ ಅಂಕಿಅಂಶಗಳನ್ನು ಬಿಡುಗಡೆ ಮಾಡುವುದನ್ನು ಚೀನಾ ನಿಲ್ಲಿಸಿದೆ. ಇದನ್ನು ಆರ್ಥಿಕ ಕುಸಿತದ ಸೂಚನೆ ಎಂದು ಕೆಲ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಜೂನ್‌ನಲ್ಲಿ ಚೀನಾದಲ್ಲಿ ನಗರ ಪ್ರದೇಶದ 16 ರಿಂದ 24 ವರ್ಷ ವಯಸ್ಸಿನವರ ನಿರುದ್ಯೋಗ ದರವು 20 ಪ್ರತಿಶತಕ್ಕಿಂತ ಹೆಚ್ಚಾಗಿದೆ. ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ದೇಶದ ಕೇಂದ್ರ ಬ್ಯಾಂಕ್ ಮಂಗಳವಾರ ಸಾಲದ ವೆಚ್ಚವನ್ನು ಕಡಿತಗೊಳಿಸಿದೆ. ಮಂಗಳವಾರ ಪ್ರಕಟವಾದ ಅಧಿಕೃತ ಅಂಕಿಅಂಶಗಳು ಚೀನಾದ ಒಟ್ಟಾರೆ ನಿರುದ್ಯೋಗ ದರವು ಜುಲೈನಲ್ಲಿ 5.3 ಶೇಕಡಾಕ್ಕೆ ಏರಿದೆ ಎಂದು ತೋರಿಸಿದೆ.

ಸರ್ಕಾರ ಯುವಕರ ನಿರುದ್ಯೋಗ ದತ್ತಾಂಶವನ್ನು ಪ್ರಕಟಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಹೇಳಿದೆ. ಈ ಕುರಿತು ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೊದ ವಕ್ತಾರ ವಕ್ತಾರ ಫು ಲಿಂಗುಯಿ ಮಾತನಾಡಿದ್ದು ಯುವ ಜನರಲ್ಲಿ ನಿರುದ್ಯೋಗವನ್ನು ಲೆಕ್ಕಾಚಾರ ಮಾಡುವ ವಿಧಾನವನ್ನು ಮರುಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾರೆ.

ದೇಶದ ಆರ್ಥಿಕತೆ ಮತ್ತು ಸಮಾಜವು ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ನಿಟ್ಟಿನಲ್ಲಿ ಅಂಕಿಅಂಶಗಳ ಪಟ್ಟಿಯನ್ನು ಸುಧಾರಿಸುವ ಅಗತ್ಯವಿದೆ” ಎಂದು ಫು ಲಿಂಗುಯಿ ತಿಳಿಸಿದ್ದಾರೆ.

ಚೀನಾ 2018 ರಲ್ಲಿ ಯುವ ನಿರುದ್ಯೋಗ ಅಂಕಿಅಂಶಗಳನ್ನು ಪ್ರಕಟಿಸಲು ಪ್ರಾರಂಭಿಸಿತು. ಆದರೆ  ಗ್ರಾಮೀಣ ಪ್ರದೇಶಗಳಲ್ಲಿನ ಯುವಜನರ ಉದ್ಯೋಗ ಸ್ಥಿತಿಯ ಡೇಟಾವನ್ನು ಅಲ್ಲಿ ಪ್ರಕಟಿಸುವುದಿಲ್ಲ. ದೇಶದಲ್ಲಿ ಕೋವಿಡ್‌ ಸಾಂಕ್ರಾಮಿಕ ನಂತರದ ಆರ್ಥಿಕ ಚೇತರಿಕೆ ನಿಧಾನವಾಗುತ್ತಿರುವುದರಿಂದ ಈ ಪ್ರಕಟಣೆ ಬಂದಿದೆ ಎಂದು ಬಿಬಿಸಿ ವರದಿ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು