News Karnataka Kannada
Saturday, May 18 2024
ವಿದೇಶ

ಬ್ರಿಟನ್‌ ಇಸ್ರೇಲ್‌ ನೊಂದಿಗಿದೆ ಎಂದ ರಿಷಿ ಸುನಕ್

Rishi Sunak
Photo Credit : News Kannada

ಟೆಲ್ ಅವಿವ್: ಅಕ್ಟೋಬರ್ 7 ರಂದು ಇಸ್ರೇಲ್‌ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ಭಯಾನಕ ಭಯೋತ್ಪಾದನಾ ಕೃತ್ಯ” ಎಂದು ಖಂಡಿಸಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಬ್ರಿಟನ್ ಇಸ್ರೇಲ್‌ನೊಂದಿಗೆ ನಿಂತಿದೆ ಎಂದು ಹೇಳಿದ್ದಾರೆ. ಟೆಲ್ ಅವೀವ್‌ನ ವಿಮಾನ ನಿಲ್ದಾಣದ ಹೊರಗೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸುನಕ್‌ ಸುನಕ್ ಈ ಹೇಳಿಕೆ ನೀಡಿದ್ದಾರೆ.

ಇಸ್ರೇಲ್‌ ನಾಯಕರೊಂದಿಗೆ ಮಾತುಕತೆ ನಡೆಸಲು ನಾನು ಉತ್ಸುಕನಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಎಕ್ಸ್‌ ನಲ್ಲಿ ಬರೆದುಕೊಂಡಿರುವ ಅವರು ನಾನು ಈಗ ಇಸ್ರೇಲ್‌ನಲ್ಲಿದ್ದೇನೆ, ಇಸ್ರೇಲ್‌ ದುಃಖದಲ್ಲಿರುವ ರಾಷ್ಟ್ರ. ನಾನು ನಿಮ್ಮೊಂದಿಗೆ ದುಃಖಿಸುತ್ತೇನೆ ಮತ್ತು ಭಯೋತ್ಪಾದನೆಯೆಂಬ ದುಷ್ಟತನದ ವಿರುದ್ಧ ನಿಮ್ಮೊಂದಿಗೆ ಇಂದು ಮತ್ತು ಯಾವಾಗಲೂ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.

ಸಂಘರ್ಷ ತೀವ್ರವಾಗುವುದನ್ನು ತಪ್ಪಿಸಲು ವಿಶ್ವದ ಎಲ್ಲ ನಾಯಕರು ಈ ಕ್ಷಣದಲ್ಲಿ ಒಗ್ಗೂಡಬೇಕಿದೆ. ನಾವು ಕೂಡ ಆ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಗಾಜಾಕ್ಕೆ ಮಾನವೀಯ ಸಹಾಯವನ್ನು ನೀಡಲು ಮತ್ತು ಗಾಜಾದಲ್ಲಿ ಸಿಕ್ಕಿಬಿದ್ದಿರುವ ಬ್ರಿಟಿಷ್‌ ಪ್ರಜೆಗಳನ್ನು ರಕ್ಷಿಸಲು ಅನುಕೂಲಕರ ಮಾರ್ಗವನ್ನು ಕಂಡುಹಿಡಿಯಬೇಕಿದೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು