ಪ್ಯಾಲೆಸ್ಟೀನ್: ಹಮಾಸ್ ಉಗ್ರರ ನಿಯಂತ್ರಣದಲ್ಲಿರುವ ಗಾಜಾಪಟ್ಟಿಯಿಂದ ಇಸ್ರೇಲ್ ಮೇಲೆ ಬರೋಬ್ಬರಿ 5,000 ರಾಕೆಟ್ ದಾಳಿ ಮಾಡಲಾಗಿದ್ದು, ಇದೀಗ ಇಸ್ರೇಲ್ ಯುದ್ಧದ ಸನ್ನಿವೇಶ ಘೋಷಣೆ ಮಾಡಿದೆ. ಇಂದು ಮುಂಜಾನೆ ಗಾಜಾಪಟ್ಟಿಯಿಂದ 5,000 ರಾಕೆಟ್ಗಳ ದಾಳಿ ನಡೆಸಲಾಗಿದ್ದು, ಹಮಾಸ್ ಬಂಡುಕೋರರು ಇಸ್ರೇಲ್ ಗಡಿಯೊಳಗೆ ನುಗ್ಗಿದ್ದಾರೆ.
ಈ ವೇಳೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುದ್ಧ ಸನ್ನಿವೇಶವನ್ನು ಘೋಷಿಸಿದ್ದಾರೆ. ಹಮಾಸ್ ಬಂಡುಕೋರರ ದಾಳಿ ಬೆನ್ನಲ್ಲೇ ಗಾಜಾಪಟ್ಟಿಯಲ್ಲಿನ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಪ್ರತಿ ದಾಳಿ ನಡೆಸಿದೆ. ಜೆರುಸಲೆಂನಲ್ಲಿ ವಾಯು ದಾಳಿ ಸೈರನ್ ಮೊಳಗಿಸಲಾಗಿದೆ.ತನ್ನ ಕೃತ್ಯಗಳಿಗಾಗಿ ಹಮಾಸ್ ಭಾರೀ ಬೆಲೆ ತೆರಬೇಕಾಗಲಿದೆ ಎಂದು ನೆತನ್ಯಾಹು ಸರ್ಕಾರ ಎಚ್ಚರಿಕೆ ನೀಡಿದೆ.