News Karnataka Kannada
Saturday, May 04 2024
ದೆಹಲಿ

ಪ್ಯಾಲಿಸ್ತೇನಿಯನ್ನರಿಗೆ 2.5 ಕೋಟಿ ರೂ. ನೆರವು ಘೋಷಿಸಿದ ಮಲಾಲಾ

2.5 crore for Palestinians. Malala announces aid
Photo Credit : Facebook

ನವದೆಹಲಿ: ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸೂಫಝೈ ಅವರು ಪ್ಯಾಲಿಸ್ತೇನಿಯನ್ನರಿಗೆ ಸಹಾಯ ಮಾಡುವ ಮೂರು ದತ್ತಿಗಳಿಗೆ ಸುಮಾರು 2.5 ಕೋಟಿ ರೂ. ನೆರವು ನೀಡುವುದಾಗಿ ಹೇಳಿದ್ದಾರೆ.

ಗಾಜಾದ ಆಸ್ಪತ್ರೆಯಲ್ಲಿ ನಡೆದ ಭೀಕರ ದಾಳಿಯಿಂದಾಗಿ 500 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದು, ಬಹಳ ಗಾಬರಿಯಾಗಿದೆ ಎಂದು ಅವರು ವಿಡಿಯೋ ಮೂಲಕ ಹೇಳಿಕೆ ನೀಡಿದ್ದಾರೆ. ಗಾಜಾದಲ್ಲಿರುವವರಿಗೆ ನೆರವು ಒದಗಿಸಲು ಇಸ್ರೇಲ್‌ ಅನುಮತಿ ನೀಡಬೇಕು ಎಂದು ಮಲಾಲಾ ಒತ್ತಾಯಿಸಿದ್ದಾರೆ.

ಗಾಜಾದ ಅಹ್ಲಿ ಅರಬ್‌ ಆಸ್ಪತ್ರೆ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಕನಿಷ್ಠ 500 ಮಂದಿ ಸಾವಿಗೀಡಾಗಿದ್ದರು. ಜಗತ್ತಿನಾದ್ಯಂತ ಮಹಿಳೆಯರ ಶಿಕ್ಷಣದ ಹಕ್ಕಿಗಾಗಿ ಕೆಲಸ ಮಾಡುತ್ತಿರುವ ಪಾಕಿಸ್ತಾನ ಮೂಲದ ಮಲಾಲಾಗೆ ಚಿಕ್ಕ ಹುಡುಗಿಯಾಗಿದ್ದಾಗ ಶಾಲೆಗೆ ಪ್ರವೇಶಿಸಲು ಅವಕಾಶವಿರಲಿಲ್ಲ. ಆದರೆ ಅನೇಕರಂತೆ ಮಲಾಲಾ ಅದನ್ನು ಒಪ್ಪಿಕೊಳ್ಳಲಿಲ್ಲ ಮತ್ತು ಮನೆಯಲ್ಲಿ ಇರಲು ನಿರಾಕರಿಸಿದರು.

ತಮ್ಮೊಂದಿಗೆ ಯುವತಿಯರಿಗೆ ಶಿಕ್ಷಣವನ್ನು ಒದಗಿಸುವುದಕ್ಕಾಗಿ ಅವರು ತನ್ನ ಧ್ವನಿಯನ್ನು ಎತ್ತಿದರು. ಈ ಹೋರಾಟಕ್ಕಾಗಿ ಅವರ ಮೇಲೆ ಹಲವಾರು ಬಾರಿ ದಾಳಿ ಕೂಡ ಮಾಡಲಾಯಿತು. ಇದೆಲ್ಲವನ್ನು ಮೆಟ್ಟಿ ನಿಂತ ಮಲಾಲಾ ಅವರು ಮಹಿಳಾ ಶಿಕ್ಷಣಕ್ಕಾಗಿ ಹೋರಾಡುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು