ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಫಖ್ತುಂಖ್ವಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, 9 ಮಂದಿ ಪಾಕ್ ಸೈನಿಕರು ಸಾವನ್ನಪ್ಪಿದ್ದು, 17 ಮಂದಿ ಗಾಯಗೊಂಡಿದ್ದಾರೆ.
ಮೋಟರ್ ಸೈಕಲ್ ನಲ್ಲಿ ಬಂದ ಆತ್ಮಾಹುತಿ ದಾಳಿಕೋರನೊಬ್ಬ ಈ ಕೃತ್ಯ ಎಸಗಿದ್ದಾನೆ. ಘಟನೆಯಲ್ಲಿ ಇತರ 20 ಮಂದಿ ಗಾಯಗೊಂಡಿದ್ದು, ಇದು ದೇಶದಲ್ಲಿ ಹೆಚ್ಚುತ್ತಿರುವ ಉಗ್ರಗಾಮಿ ಹಿಂಸಾಚಾರಕ್ಕೆ ಉದಾಹರಣೆ ಎಂದು ಸೇನೆ ಹಾಗೂ ಮೂವರು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ. ಈ ಘಟನೆ ಜಮ್ಮು – ಕಾಶ್ಮೀರದ ಉರಿ ಪಟ್ಟಣದ ಸಮೀಪ, 18 ಸೆಪ್ಟೆಂಬರ್ 2016 ರಂದು ನಡೆದ ದಾಳಿಯನ್ನು ನೆನಪಿಸಿದೆ.
ಅಪ್ಘಾನಿಸ್ತಾನದ ಗಡಿಯ ಖೈಬರ್ ಪುಂಖ್ಟುಖ್ವಾ ಪ್ರಾಂತ್ಯದ ಬನ್ನು ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ ಎಂದು ಸೇನೆ ಹೇಳಿಕೆ ನೀಡಿದೆ. ಘಟನೆಯಲ್ಲಿ 5 ಮಂದಿ ಸೈನಿಕರು ಗಾಯಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಆದರೆ ಭದ್ರತಾ ಅಧಿಕಾರಿಗಳು, ಗಾಯಾಳುಗಳ ಸಂಖ್ಯೆ 20 ಎಂದು ಪ್ರಕಟಿಸಿದ್ದಾರೆ.
ಈ ಘಟನೆ ಬಗ್ಗೆ ಯಾವುದೇ ಸಂಘಟನೆಗಳು ಹೊಣೆ ಹೊತ್ತಿಲ್ಲವಾದರೂ ಇದು 2022ರಿಂದೀಚೆಗೆ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಿರುವ ಪಾಕಿಸ್ತಾನಿ ತಾಲಿಬಾನ್ನ ಕೃತ್ಯ ಎಂದು ಶಂಕಿಸಲಾಗಿದೆ. ಹಲವೆಡೆ ವನ್ಯಧಾಮಗಳಲ್ಲಿ ಇಂಥ ಉಗ್ರರು ಆಶ್ರಯ ಪಡೆದಿದ್ದು, ಅಪ್ಘಾನಿಸ್ತಾನದಲ್ಲಿ ಮುಕ್ತವಾಗಿಯೇ ವಾಸವಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.