ಸಿಂಗಪುರ: ಸಿಂಗಪುರ ಅಧ್ಯಕ್ಷಿಯ ಚುನಾವಣೆಗೆ ಮತದಾನ ಆರಂಭವಾಗಿದ್ದು, ಸ್ಪರ್ಧೆಯಲ್ಲಿ ಭಾರತೀಯ ಮೂಲದ ಸಂಜಾ ಥರ್ಮನ್ ಷಣ್ಮುಗರತ್ನಂ ಸಹ ಇದ್ದಾರೆ. ಶುಕ್ರವಾರ ಬೆಳಗ್ಗೆ ಮತದಾನ ಆರಂಭವಾಗಿದ್ದು, 27 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. ರಾತ್ರಿ 8 ಗಂಟೆವರೆಗೂ ಮತದಾನ ಕೇಂದ್ರಗಳು ತೆರೆದಿರುತ್ತವೆ. ನಂತರ ಮತ ಎಣಿಕೆ ಆರಂಭವಾಗಲಿದೆ. ಮಧ್ಯರಾತ್ರಿ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.
ಅಧ್ಯಕ್ಷ ಹುದ್ದೆಯ ರೇಸ್ ನಲ್ಲಿ ಸಿಂಗಾಪುರ್ ಇನ್ವೆಸ್ಟ್ಮೆಂಟ್ ಕಾರ್ಪ್ನ ಮಾಜಿ ಮುಖ್ಯ ಹೂಡಿಕೆ ಅಧಿಕಾರಿ ಎನ್ಜಿ ಕೊಕ್ ಸಾಂಗ್, ಸರ್ಕಾರಿ ಸ್ವಾಮ್ಯದ ಒಕ್ಕೂಟ ಆಧಾರಿತ ವಿಮಾ ಸಂಸ್ಥೆ ಎನ್ಟಿಯುಸಿಯ ಮುಖ್ಯಸ್ಥ ಟಾನ್ ಕಿನ್ ಲಿಯಾನ್ ಇದ್ದಾರೆ.
ಹಾಲಿ ಅಧ್ಯಕ್ಷ ಹಲಿಮಾ ಯಾಕುಬ್ ಅವರ ಆರು ವರ್ಷಗಳ ಅಧಿಕಾರಾವಧಿ ಸೆ.13ರಂದು ಕೊನೆಗೊಳ್ಳಲಿದೆ. ಅವರು ದೇಶದ ಎಂಟನೇ ಮತ್ತು ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದಾರೆ. ಭಾರತೀಯ ಮೂಲದ ಸಿಂಗಪುರ ಅರ್ಥಶಾಸ್ತ್ರಜ್ಞ ಥರ್ಮನ್ ಅವರು ಜುಲೈನಲ್ಲಿ ಪ್ರಚಾರ ಆರಂಭಿಸಿದ್ದರು.