News Karnataka Kannada
Sunday, April 28 2024
ದೆಹಲಿ

ಆಗಸ್ಟ್‌ ನಲ್ಲಿ ಯುಪಿಐ ವಹಿವಾಟು ಸಂಖ್ಯೆ 10 ಬಿಲಿಯನ್‌ ಗೆ ಏರಿಕೆ

UPI transactions rise to 10 billion in August
Photo Credit : IANS

ನವದೆಹಲಿ: ಇದೇ ಮೊದಲ ಬಾರಿಗೆ ಯುಪಿಐ ಆಧಾರಿತ ವಹಿವಾಟುಗಳ ಸಂಖ್ಯೆ ಮಾಸಿಕ 10 ಬಿಲಿಯನ್ ದಾಟಿದೆ. ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಆಧಾರಿತ ಪಾವತಿ ವ್ಯವಹಾರಗಳ ಸಂಖ್ಯೆ 10 ಬಿಲಿಯನ್ ದಾಟಿದೆ ಎಂದು ಎನ್‌ಪಿಸಿಐ ತಿಳಿಸಿದೆ.

ಯುಪಿಐನಲ್ಲಿ ಮಾಸಿಕ ವಹಿವಾಟುಗಳ ಸಂಖ್ಯೆ 10.24 ಬಿಲಿಯನ್‌ ದಾಟಿದ್ದು, ನಿವ್ವಳ ವಹಿವಾಟು ಮೌಲ್ಯ 15.18 ಟ್ರಿಲಿಯನ್‌ ರೂ. ಆಗಿದೆ. ಯುಪಿಐ ಮೇಲಿನ ವಹಿವಾಟುಗಳು ವರ್ಷದಿಂದ ವರ್ಷಕ್ಕೆ 50 ಪ್ರತಿಶತದಷ್ಟು ಬೆಳೆಯುತ್ತಿದೆ.ಆಗಸ್ಟ್‌ನಲ್ಲಿ 6.58 ಬಿಲಿಯನ್ ಮಾಸಿಕ ವಹಿವಾಟು ದಾಖಲಾಗಿದೆ.

ಯುಪಿಐ ವಹಿವಾಟುಗಳು 2018 ಮತ್ತು 2022 ರ ನಡುವೆ ಮೌಲ್ಯ ಮತ್ತು ಪರಿಮಾಣದ ವಿಷಯದಲ್ಲಿ ಕ್ರಮವಾಗಿ 1,320 ಪ್ರತಿಶತ ಮತ್ತು 1,876 ಪ್ರತಿಶತದಷ್ಟು ಹೆಚ್ಚಾಗಿದೆ. 2018 ರಲ್ಲಿ, ಯುಪಿಐ ವಹಿವಾಟುಗಳು 374.63 ಕೋಟಿಗಳಷ್ಟಿತ್ತು. 2018 ರಲ್ಲಿ ಯುಪಿಐ ವಹಿವಾಟು ಪ್ರಮಾಣ 5.86 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಇದು 2022 ರಲ್ಲಿ 83.2 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಆರ್‌ಬಿಐ ಈ ವರ್ಷದ ಫೆಬ್ರವರಿಯಲ್ಲಿ ವಿದೇಶಿ ಪ್ರಜೆಗಳು ಮತ್ತು ಭಾರತಕ್ಕೆ ಭೇಟಿ ನೀಡುವ ಎನ್‌ಆರ್‌ಐಗಳಿಗೆ ಅವರು ಭಾರತದಲ್ಲಿದ್ದಾಗ ಯುಪಿಐ ಬಳಸಿ ಪಾವತಿಗಳನ್ನು ಮಾಡಲು ಅನುವು ಮಾಡಿಕೊಟ್ಟಿತು.

ಈ ಸೌಲಭ್ಯವನ್ನು G20 ದೇಶಗಳ ಪ್ರಯಾಣಿಕರಿಗೆ ವಿಸ್ತರಿಸಲಾಗಿದೆ. ಆಯ್ದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ (ಬೆಂಗಳೂರು, ಮುಂಬೈ ಮತ್ತು ನವದೆಹಲಿ) ಈ ಸೌಲ್ಯಭ್ಯ ದೊರೆಯುತ್ತಿದೆ.  ಸಿಂಗಾಪುರ, ಆಸ್ಟ್ರೇಲಿಯಾ, ಕೆನಡಾ, ಹಾಂಗ್ ಕಾಂಗ್, ಓಮನ್, ಕತಾರ್, ಯುಎಸ್, ಸೌದಿ ಅರೇಬಿಯಾ, ಯುಎಇ ಮತ್ತು ಯುಕೆ ಸೇರಿದಂತೆ 10 ದೇಶಗಳಿಗೆ ಯುಪಿಐ ಸೌಲಭ್ಯ ದೊರೆಯಲಿದೆ ಎಂದು
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಹೇಳಿದೆ. ವಿದೇಶಗಳಲ್ಲಿ ಯುಪಿಐ ಬಳಕೆ 2022ರಲ್ಲಿ ಪ್ರಾರಂಭವಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು