ಬಾಗ್ದಾದ್: ಇರಾಕಿನ ಕರ್ಬಲಾ ನಗರಕ್ಕೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಶನಿವಾರ ಬಾಗ್ದಾದ್ನ ಉತ್ತರ ಭಾಗದಲ್ಲಿ ಪಲ್ಟಿಯಾಗಿದ್ದು, 18 ಜನರು ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. ಅರ್ಬೀನ್ ಶಿಯಾ ತೀರ್ಥಯಾತ್ರೆಗೆ ಇರಾಕ್ನ ವಿವಿಧ ಭಾಗ ಮತ್ತು ಇರಾನ್ ಮತ್ತು ಗಲ್ಫ್ ದೇಶಗಳಿಂದ ಯಾತ್ರಾರ್ಥಿಗಳು ಬರುತ್ತಾರೆ. ಈ ಯಾತ್ರಾರ್ಥಿಗಳು ಸಾಗುತ್ತಿದ್ದ ಬಸ್ ಪಲ್ಟಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಲು ಅಧಿಕಾರವಿಲ್ಲದ ಕಾರಣ ಪರಿಸ್ಥಿತಿಯ ಕುರಿತು ಹೆಸರನ್ನು ಉಲ್ಲೇಖಿಸದೇ ಮಾತನಾಡಿದ ಇಬ್ಬರು ಇರಾಕಿ ವೈದ್ಯಕೀಯ ಅಧಿಕಾರಿಗಳು, ಬಾಗ್ದಾದ್ನ ಉತ್ತರಕ್ಕೆ ಸುಮಾರು 55 ಮೈಲಿ ದೂರದಲ್ಲಿ ಬಲಾದ್ ಪಟ್ಟಣದ ಬಳಿ ಬಸ್ ಪಲ್ಟಿಯಾಗಿದೆ. ಬಲಿಯಾದವರಲ್ಲಿ 15 ಪುರುಷರು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ ಎಂದು ತಿಳಿಸಿದ್ದಾರೆ.