News Karnataka Kannada
Tuesday, April 30 2024
ವಿದೇಶ

ಕೆನಡಾದಿಂದ ಉಕ್ರೇನ್‌ಗೆ ಯುದ್ಧ ಟ್ಯಾಂಕ್‌- ಪ್ರಧಾನಿ ಜಸ್ಟಿನ್ ಟ್ರುಡೊ ಘೋಷಣೆ

Battle tank from Canada to Ukraine
Photo Credit : Twitter

ಒಟ್ಟಾವಾ: ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ಗೆ ಬೆಂಬಲ ನೀಡಲು ಕೆನಡಾ ನಾಲ್ಕು ಯುದ್ಧ ಟ್ಯಾಂಕ್‌ಗಳನ್ನು ನೀಡುವುದಾಗಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಘೋಷಿಸಿದ್ದಾರೆ.

ಕೆನಡಾವು ಶಸ್ತ್ರಸಜ್ಜಿತ ವಾಹನ ಮತ್ತು 5,000 ಸುತ್ತುಗಳ ಮದ್ದುಗುಂಡುಗಳನ್ನು ನೀಡಲಿದೆ. ರಷ್ಯಾದ ಸಂಸತ್ತಿನ ಕೆಳಮನೆ ಸದಸ್ಯರು ಮತ್ತು ಮಂತ್ರಿಗಳು ಸೇರಿದಂತೆ ಸುಮಾರು 200 ವ್ಯಕ್ತಿಗಳು ಮತ್ತು ಘಟಕಗಳ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸುತ್ತದೆ ಎಂದು ಟ್ರೂಡೊ ಶುಕ್ರವಾರ ಹೇಳಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶುಕ್ರವಾರದಂದು, ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲಾನಿ ಜೋಲಿ ಅವರು ಉಕ್ರೇನ್‌ಗೆ 32 ಮಿಲಿಯನ್ ಕೆನಡಿಯನ್ ಡಾಲರ್ ($25.6 ಮಿಲಿಯನ್) ಗಿಂತ ಹೆಚ್ಚಿನ ಕೊಡುಗೆಯನ್ನು ಘೋಷಿಸಿದ.ರು ಸಂಘರ್ಷ-ಸಂಬಂಧಿತ ಲೈಂಗಿಕ ಹಿಂಸೆಯನ್ನು ಪರಿಹರಿಸಲು ಮತ್ತು ರಾಸಾಯನಿಕ, ಜೈವಿಕ, ವಿಕಿರಣಶಾಸ್ತ್ರ ಮತ್ತು ಪರಮಾಣು ಬೆದರಿಕೆಗಳನ್ನು ಎದುರಿಸಲು ಇತರ ಪ್ರಯತ್ನಗಳಿಗೆ ಉಕ್ರೇನ್‌ಗೆ ಬೆಂಬಲ ನೀಡುವುದಾಗಿ ತಿಳಿಸಿದರು.

ಕೆನಡಾದ ರಕ್ಷಣಾ ಸಚಿವೆ ಅನಿತಾ ಆನಂದ್ ದೇಶವು ನಾಲ್ಕು ಯುದ್ಧ ಟ್ಯಾಂಕ್‌ಗಳನ್ನು ಉಕ್ರೇನ್‌ಗೆ ಕಳುಹಿಸಿದೆ ಎಂದು ಹೇಳಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು