ನ್ಯೂಯಾರ್ಕ್: ನ್ಯೂಯಾರ್ಕ್ ನಗರದಲ್ಲಿ ಪ್ರಯಾಣಿಕರ ರೈಲು ಹಳಿತಪ್ಪಿದ ಪರಿಣಾಮ ಕನಿಷ್ಠ 13 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಕ್ವೀನ್ಸ್ ಬರೋದ 175 ನೇ ಸ್ಟ್ರೀಟ್ ಮತ್ತು 95 ನೇ ಅವೆನ್ಯೂದಲ್ಲಿರುವ ಜಮೈಕಾ ನಿಲ್ದಾಣದ ಪೂರ್ವಕ್ಕೆ ಲಾಂಗ್ ಐಲ್ಯಾಂಡ್ ರೈಲ್ ರೋಡ್ ರೈಲು ಗುರುವಾರ ಬೆಳಿಗ್ಗೆ 11.12 ರ ಸುಮಾರಿಗೆ ಹೆಂಪ್ಸ್ಟೆಡ್ ಕಡೆಗೆ ತೆರಳುತ್ತಿದ್ದಾಗ ಹಳಿ ತಪ್ಪಿದೆ ಎಂದು ಮೆಟ್ರೋಪಾಲಿಟನ್ ಸಾರಿಗೆ ಪ್ರಾಧಿಕಾರದ (ಎಂಟಿಎ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲಿನ ಎಲ್ಲಾ ಎಂಟು ಬೋಗಿಗಳು ಹಳಿ ತಪ್ಪಿವೆ ಎಂದು ಎಂಟಿಎ ಅಧ್ಯಕ್ಷ ಮತ್ತು ಸಿಇಒ ಜನ್ನೊ ಲೀಬರ್ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಅಗ್ನಿಶಾಮಕ ದಳದವರು ಹಳಿ ತಪ್ಪಿದ ರೈಲಿನಿಂದ ಪ್ರಯಾಣಿಕರನ್ನು ಬೇರೆ ರೈಲಿಗೆ ಸ್ಥಳಾಂತರಿಸಿದ್ದಾರೆ
“ಎಲ್ಲಾ ಪ್ರಯಾಣಿಕರು ಮತ್ತು ರೈಲ್ವೆ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಮತ್ತು ರೈಲು ಸೇವೆ ಆದಷ್ಟು ಬೇಗ ಪುನರಾರಂಭಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿದೆ” ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇನ್ನು ಈ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.