ಹನೊಯಿ: ಹಲವರಿಗೆ ಕೊರೊನಾ ಸೋಂಕು ತಗುಲಲು ಕಾರಣನಾದ ವ್ಯಕ್ತಿಗೆ ವಿಯೆಟ್ನಾಂ ನ್ಯಾಯಾಲಯ 5 ವರ್ಷ ಸೆರೆವಾಸ ಶಿಕ್ಷೆ ವಿಧಿಸಿದ ಘಟನೆ ನಡೆದಿದೆ. ಲೆ ವಾನ್ ಎಂಬಾತ ಈ ಹಿಂದೆ ಕೊರೊನಾಗೆ ತುತ್ತಾಗಿದ್ದ.
ಆ ಸಂದರ್ಭದಲ್ಲಿ ಕ್ವಾರಂಟೈನ್ ನಲ್ಲಿ ಇರುವುದು ಬಿಟ್ಟು ನಿಯಮ ಉಲ್ಲಂಘಿಸಿ ಸ್ವಚ್ಛಂದವಾಗಿ ತಿರುಗಾಡಿದ್ದ. ಅವನ ಸ್ವಚ್ಛಂದ ತಿರುಗಾಟದಿಂದಾಗಿ ಹಲವರಿಗೆ ಕೊರೊನಾ ಸೋಂಕು ತಗುಲಿತ್ತು. ಆ ಸೋಂಕಿತರಲ್ಲಿ ಓರ್ವ ಮೃತಪಟ್ಟಿದ್ದ .