News Karnataka Kannada
Monday, April 29 2024
ವಿದೇಶ

ವುಹಾನ್ ನಲ್ಲಿ ಮತ್ತೆ ಹರಡುತ್ತಿರುವ ಕರೋನಾ ಕಠಿಣ, ಕ್ರಮಕ್ಕೆ ಮುಂದಾದ ಸರ್ಕಾರ

Covid
Photo Credit :
ಬೀಜಿಂಗ್ : ವ್ಯಾಪಾಕವಾಗಿ ಹರಡುತ್ತಿರುವ ಕರೋನಾ ಸೋಂಕನ್ನು ತಡೆಗಟ್ಟಲು ಚೀನಾ ಕಠಿಣ ಜರುಗಿಸುವುದಕ್ಕೆ ಮುಂದಾಗಿದೆ.  ಸೋಂಕು ತಗುಲಿದ ಕುಟುಂಬದ ನಿವಾಸಿಗಳನ್ನು ಚೀನಾ ಅಧಿಕಾರಿಗಳು ಮನೆಯ ಒಳಗೆ ಕೂಡಿ ಹಾಕುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಹಿಂದೆ ಚೀನಾದ ವುಹಾನ್‌ನಲ್ಲಿ ಮೊದಲು ಕೊರೊನಾ ವೈರಸ್ ಸೋಂಕು ಹರಡಲು ಆರಂಭವಾದಾಗ ಇದೇ ರೀತಿಯ  ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಈಗ ಚೀನೀ ಅಧಿಕಾರಿಗಳನ್ನು ಅದನ್ನು ಪುನಃ ಪ್ರಯೋಗಿಸುತ್ತಿದ್ದಾರೆ ಎಂದು ‘ತೈವಾನ್ ನ್ಯೂಸ್’ ವರದಿಗಾರ ಕಿಯೋನಿ ಎವರಿಂಗ್ಟನ್ ತಿಳಿಸಿದ್ದಾರೆ.
ಪಿಪಿಇ ಕಿಟ್ ಧರಿಸಿದ ಅಧಿಕಾರಿಗಳು ಮನೆಗಳ ಒಳಗೆ ಜನರನ್ನು ಕೂಡಿ ಹಾಕಿ, ಅವರು ಹೊರಬರದಂತೆ ತಡೆಯಲು ಬಾಗಿಲಿಗೆ ಕಬ್ಬಿಣದ ಪಟ್ಟಿಯನ್ನು ಅಡ್ಡಲಾಗಿ ಜೋಡಿಸಿ ಮೊಳೆ ಹೊಡೆಯುವ ವಿಡಿಯೋಗಳು ಟ್ವಿಟ್ಟರ್, ಯೂಟ್ಯೂಬ್ ಮತ್ತು ವೀಬೋಗಳಲ್ಲಿ ಹರಿದಾಡುತ್ತಿವೆ.
ಕ್ವಾರೆಂಟೈನ್‌ನಲ್ಲಿ ಇರಬೇಕಾದ ವ್ಯಕ್ತಿ, ‘ಗಾಳಿ ಸೇವನೆ’ಗಾಗಿ ಅಪಾರ್ಟ್‌ಮೆಂಟ್‌ನಿಂದ ಹೊರಗೆ ಹೋಗಿದ್ದಾಗ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ಆತನನ್ನು ಮನೆಯೊಳಗೆ ಬಂಧಿ ಮಾಡಿದ ವಿಡಿಯೋ ವೈರಲ್ ಆಗಿದೆ.
ಕೋವಿಡ್ ಸೋಂಕಿತರು ಹಾಗೂ ಅವರ ಸಂಪರ್ಕಿತರ ಮನೆಗಳಿಂದ ಜನರು ಹೊರಗೆ ಬರದಂತೆ ನಿರ್ಬಂಧಿಸಲಾಗಿದೆ. ಅವರ ಮನೆಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ದಿನಕ್ಕೆ ಮೂರು ಸಲಕ್ಕಿಂತ ಹೆಚ್ಚು ಬಾಗಿಲು ತೆರೆದವರ ಮನೆಗೆ ಅಧಿಕಾರಿಗಳು ಸಂಪೂರ್ಣವಾಗಿ ಬೀಗ ಮುದ್ರೆ ಹಾಕುತ್ತಿದ್ದಾರೆ. ‘ಜನರು ಹೊರಗೆ ಬರುವಂತಿಲ್ಲ. ಅವರು ಸಿಕ್ಕಿಕೊಂಡರೆ ಬಾಗಿಲಿಗೆ ಬೀಗ ಹಾಕಬೇಕಾಗುತ್ತದೆ’ ಎಂದು ಎಚ್ಚರಿಕೆಗಳನ್ನು ನೀಡಲಾಗುತ್ತಿದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು