News Karnataka Kannada
Saturday, April 27 2024
ವಿದೇಶ

ಅಫ್ಘಾನ್ ನಲ್ಲಿ ಇನ್ಮುಂದೆ ಹೆಣ್ಣುಮಕ್ಕಳು ಕೇವಲ 3ನೇ ತರಗತಿವರೆಗೆ ಮಾತ್ರ ಶಿಕ್ಷಣ

Taliban eduction
Photo Credit : News Kannada

ಅಫ್ಘಾನ್: ಅಫ್ಘಾನಿಸ್ತಾನದಲ್ಲಿ ಇನ್ಮುಂದೆ ಹೆಣ್ಣುಮಕ್ಕಳು ಶಿಕ್ಷಣ ಕೇವಲ 3ನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆಯಬಹುದು ಎಂದು ತಾಲಿಬಾನ್ ಸರ್ಕಾರ ಹೊಸ ಆದೇಶ ಹೊರಡಿಸಿದೆ. 10 ವರ್ಷದ ನಂತರ ಹೆಣ್ಣುಮಕ್ಕಳು ಓದುವ ಹಕ್ಕನ್ನು ತಾಲಿಬಾನ್ ಸರ್ಕಾರ ಕಸಿದುಕೊಂಡಿದೆ.

ಹೊಸ ಆದೇಶಕ್ಕೆ ಸುಮಾರು 223 ದಿನಗಳ ಮೊದಲು, ಹೆಣ್ಣುಮಕ್ಕಳು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವುದನ್ನು ನಿಷೇಧಿಸಲಾಯಿತು. ಈ ಹಿಂದೆ 6ನೇ ತರಗತಿವರೆಗೆ ಹೆಣ್ಣು ಮಕ್ಕಳಿಗೆ ಶಾಲೆಗಳಲ್ಲಿ ಓದಲು ಅವಕಾಶವಿತ್ತು.

ತಾಲಿಬಾನ್ ಈ ಹಿಂದೆ ಬ್ಯೂಟಿ ಪಾರ್ಲರ್‌ಗಳಲ್ಲಿ ಮಹಿಳೆಯರು ಕೆಲಸ ಮಾಡುವಂತಿಲ್ಲ ಎಂದು ಹೇಳಿತ್ತು. ತಾಲಿಬಾನ್ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್ ನೀಡುವುದನ್ನು ನಿಲ್ಲಿಸಿತ್ತು. ತಾಲಿಬಾನ್ ಈಗ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ 10 ವರ್ಷಕ್ಕಿಂತ ಮೇಲ್ಪಟ್ಟ ಬಾಲಕಿಯರನ್ನು ಪ್ರಾಥಮಿಕ ಶಾಲೆಗೆ ಸೇರಿಸದಂತೆ ಸೂಚನೆ ನೀಡಿದೆ ಎಂದು ಬಿಬಿಸಿ ಪರ್ಷಿಯನ್ ವರದಿ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು