ಒಡಿಶಾ: ಒಡಿಶಾದ ಮಯೂರ್ ಬಂಜ್ ಜಿಲ್ಲೆಯಲ್ಲಿನ ಸಿಮ್ಲಿಪಾಲ್ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮೆಲಾನಿಸ್ಟಿಕ್ ಹುಲಿಯೊಂದು ಅಪರೂಪಕ್ಕೆ ಕಾಣಿಸಿಕೊಂಡಿದೆ. ನೋಡಲು ಭಯಾನಕವಾಗಿರುವ ಈ ಹುಲಿಯು ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿರೋದು ಅಪರೂಪ. ನೋಡಲು ಭಯಾನಕವಾಗಿ ಕಾಣಿಸುವ ಈ ಹುಲಿ ದೇಹವೆಲ್ಲ ಕಪ್ಪು ಬಣ್ಣದಿಂದ ಕೂಡಿದೆ. ಬೇಟೆಯಾಡಲು ಮರದ ಬುಡದಲ್ಲಿ ತಡಬಡಿಸಿ ಬಳಿಕ ಅಲ್ಲಿಂದ ಹೋಗಿದೆ.
ಇನ್ನು ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ರಮೇಶ್ ಪಾಂಡೆ ಅವರು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಬ್ಲ್ಯಾಕ್ ಟೈಗರ್ ಮರದ ಬುಡದಲ್ಲಿ ಬೇಟೆಯಾಡಲು ಹವಣಿಸುತ್ತಿರುತ್ತೆ. ಆದರೆ ಬೇಟೆ ಸಿಗದಿದ್ದಕ್ಕೆ ಅಲ್ಲಿಂದ ಹೊರಟು ಹೋಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ.
Beautiful camera trap video of a melanistic tiger in Similipal Tiger Reserve, Odisha, the only place where we see blackish tigers because of genetic mutations in the population. pic.twitter.com/KXqvjX8tvs
— Ramesh Pandey (@rameshpandeyifs) August 1, 2023